Breaking News

ಕುವೆಂಪು ವಿವಿಯಲ್ಲಿ ಅಧಿಕಾರಿಯ ಡಿಜಿಟಲ್ ಕೀ ಬಳಸಿ ಅಂಕ ತಿದ್ದಿದ ಇಬ್ಬರ ವಿರುದ್ಧ FIR ದಾಖಲು!

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ UUCMS ತಂತ್ರಾಂಶ ದುರುಪಯೋಗಪಡಿಸಿಕೊಂಡು ಫೇಲ್ ಆಗಿದ್ದ ವಿದ್ಯಾರ್ಥಿಯ ಅಂಕಗಳನ್ನು ಅಕ್ರಮವಾಗಿ ತಿದ್ದಿ ಪಾಸ್ ಮಾಡಿರುವ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆ ಸಿಬ್ಬಂದಿ ಅನುಷಾ ಹಾಗೂ PES ಕಾಲೇಜಿನ ವಿದ್ಯಾರ್ಥಿ ವರ್ಷಿತ್ ಎನ್. ವಿರುದ್ಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರ್ಷಿತ್ ಎರಡು ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದರೂ, ಫಲಿತಾಂಶ ಪ್ರಕಟಕ್ಕೂ ಮುನ್ನವೇ UUCMS ಪೋರ್ಟಲ್‌ನಲ್ಲಿ ಅಂಕಗಳನ್ನು ಬದಲಾಯಿಸಿ ಪಾಸ್ ಮಾಡಲಾಗಿದೆ. ಒಂದು ವಿಷಯದ ಅಂಕ ತಿದ್ದಲು ₹10,000 ಹಾಗೂ ಐದು ವಿಷಯಗಳಿಗೆ ₹50,000 ನೀಡುವುದಾಗಿ ಆಮಿಷವೊಡ್ಡಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಧಿಕಾರಿಯ DSC, OTP ಹಾಗೂ ಲಾಗಿನ್ ವಿವರಗಳನ್ನು ದುರುಪಯೋಗಪಡಿಸಿಕೊಂಡು ಅಂಕ ತಿದ್ದಿರುವ ಶಂಕೆ ವ್ಯಕ್ತವಾಗಿದೆ. BNS ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಪೊಲೀಸರು IP ಲಾಗ್‌ಗಳು, ಹಣಕಾಸು ವ್ಯವಹಾರ ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

Share News

About BigTv News

Check Also

ಗೋ ಕಳ್ಳತನ ಮಾಡುತ್ತಿದ್ದ ಆರೋಪಿ ಸೆರೆ

ಕುಮಟಾ: ಪಟ್ಟಣದಲ್ಲಿ ನಡೆದ ಗೋ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಮೂಲದ ಓರ್ವ ಆರೋಪಿಯನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ. ರಸ್ತೆಬದಿ …

Leave a Reply

Your email address will not be published. Required fields are marked *