Breaking News

ಹಾಡಹಗಲೇ ಜಿಮ್ ತರಬೇತುದಾರನ ಮರ್ಡರ್! 20 ಸುತ್ತು ಗುಂಡು ಹಾರಿಸಿ ಕೊಲೆಗೈದ ದುಷ್ಕರ್ಮಿಗಳು!

ನವದೆಹಲಿ: ದಕ್ಷಿಣ ದೆಹಲಿಯ ಆಯಾ ನಗರದಲ್ಲಿ ಜಿಮ್ ತರಬೇತುದಾರನನ್ನು ದುಷ್ಕರ್ಮಿಗಳು ಸುಮಾರು 20 ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಇಬ್ಬರು ಆರೋಪಿಗಳು ವಾಹನದಲ್ಲಿ ಬಂದು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಫತೇಪುರ್ ಬೆರಿ ಠಾಣಾ ವ್ಯಾಪ್ತಿಯ ಹಂಸಾ ಚೌಕ್‌ನ ದಿ ಪರ್ಫೆಕ್ಟ್ ಜಿಮ್‌ನಲ್ಲಿ ಘಟನೆ ನಡೆದಿದೆ. ವೈಯಕ್ತಿಕ ದ್ವೇಷ ಅಥವಾ ದರೋಡೆಕೋರರ ನಂಟಿನಿಂದ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ವಿಶೇಷ ಘಟಕ ಹಾಗೂ ವಿಶೇಷ ಸಿಬ್ಬಂದಿ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Share News

About BigTv News

Check Also

ಗೋ ಕಳ್ಳತನ ಮಾಡುತ್ತಿದ್ದ ಆರೋಪಿ ಸೆರೆ

ಕುಮಟಾ: ಪಟ್ಟಣದಲ್ಲಿ ನಡೆದ ಗೋ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಮೂಲದ ಓರ್ವ ಆರೋಪಿಯನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ. ರಸ್ತೆಬದಿ …

Leave a Reply

Your email address will not be published. Required fields are marked *