ಬಂಟ್ವಾಳ ಪರಿಸರದಲ್ಲಿ ಹಲವು ವರ್ಷ ಗಳಿಂದ ದಿನ ಪತ್ರಿಕೆಗಳು ಹಾಗೂ ಹಾಲನ್ನು ನಿತ್ಯ ಮನೆ ಮನೆಗಳಿಗೆ ತಲುಪಿಸುತ್ತಿದ್ದ ಬಡ್ಡಕಟ್ಟೆ ಬಳಿಯ ದೈವಗುಡ್ಡೆ ನಿವಾಸಿ ಪ್ರಶಾಂತ್ ಬಾಳಿಗಾ (54) ಅವರು ಶನಿವಾರ ಬೆಳಗ್ಗೆ ಬಂಟ್ವಾಳ ಬೈಪಾಸ್ ಬಳಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಶನಿವಾರ ಮುಂಜಾನೆಯೂ 4ರ ಸುಮಾರಿಗೆ ಮನೆಯಿಂದ ಹೊರಟು ಸಾಕಷ್ಟು ವಿತರಣೆಯ ಕಾರ್ಯ ಮುಗಿಸಿದ್ದರು. ಬೆಳಗ್ಗೆ 8 ಗಂಟೆ ವರೆಗೂ ದಿನಪತ್ರಿಕೆಗಳು, ಹಾಲಿನ ಪ್ಯಾಕೆಟ್ ತುಂಬಿದ್ದ ಅವರ ಸ್ಕೂಟರ್ ಬಂಟ್ವಾಳ ಬೈಪಾಸ್ ಬಳಿ ಅನಾಥವಾಗಿ ನಿಂತಿರುವುದನ್ನು ಕಂಡು ಸಂಶಯಗೊಂಡು ಸ್ಥಳೀಯರು ಪಕ್ಕದಲ್ಲಿರುವ ಬಾವಿಯ ಬಳಿ ತೆರಳಿ ನೋಡಿದಾಗ ಅವರ ದೇಹ ಬಾವಿಯಲ್ಲಿ ತೇಲುತ್ತಿತ್ತು. ಬಂಟ್ವಾಳದಲ್ಲಿ ಅವರು ಎಲ್ಲರಿಗೂ ಚಿರಪರಿಚಿತ ರಾಗಿ ದ್ದರು. ಹಾಲು, ಪತ್ರಿಕೆಗಳ ಕೆಲಸ ಮುಗಿದ ಬಳಿಕ ಪಿಗ್ಮಿ ಸಂಗ್ರಹದ ಕಾರ್ಯ ಮಾಡುತ್ತಿದ್ದರು. ಮೃತರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಖಚಿತಗೊಂಡಿಲ್ಲ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

