ಇಲ್ಲಿನ ಇಂದಿರಾನಗರದ ಹೊರವಲಯದಲ್ಲಿ ಬುಧವಾರ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.ತಾಲ್ಲೂಕಿನ ಗೋಗಿ (ಕೆ) ಗ್ರಾಮದ ಜಯಮ್ಮ ಗಂಡ ಪರಶುರಾಮ ಹೊಸ್ಮನಿ (35) ಎಂದು ಗುರುತಿಸಲಾಗಿದೆ. ‘ಜಯಮ್ಮ ಅವರಿಗೆ ಮೂರು ಜನ ಗಂಡು ಮಕ್ಕಳು ಇದ್ದಾರೆ. ಎರಡು ತಿಂಗಳಿನಿಂದ ಮೂಲವ್ಯಾದಿ ಕಾಯಿಲೆಯಿಂದ ಬಳಲುತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಜಯಮ್ಮಳ ಸಹೋದರ (ಅಣ್ಣ) ತಿಮ್ಮಯ್ಯ ಗುಂಕಲಗದೊಡ್ಡಿ ಅವರು ನನ್ನ ಸಹೋದರಿಯ ಸಾವಿನಲ್ಲಿ ಸಂಶಯವಿದೆ ಎಂದು ಶಹಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

