Breaking News

ಕನಕಪುರ: ಮೊಬೈಲ್ ನಂಬರ್ ಹ್ಯಾಕ್‌ ಮಾಡಿ ₹1.50 ಲಕ್ಷ ವರ್ಗಾವಣೆ

ಸೈಬರ್ ವಂಚಕರು ಮೊಬೈಲ್ ನಂಬರ್ ಹ್ಯಾಕ್ ಮಾಡಿ ವ್ಯಕ್ತಿಯೊಬ್ಬರ ಖಾತೆಯಿಂದ ₹1.50 ಲಕ್ಷ ವರ್ಗಾವಣೆ ಮಾಡಿಕೊಂಡಿರುವ ಘಟನೆ ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಸಾತನೂರು ಹೋಬಳಿ ಕಂಚನಹಳ್ಳಿ ಗ್ರಾಮದ ಗಂಗಾಧರ್ ಹಣ ಕಳೆದುಕೊಂಡ ವ್ಯಕ್ತಿ. ಡಿ.23 ರಂದು ಗಂಗಾಧರ್ ಅವರ ವಾಟ್ಸ್‌ ಆಯಪ್‌ಗೆ ವಂಚಕರು ಆರ್‌ಟಿಒ ಇ-ಚಲನ್ ಅಯಪ್‌ ಎಂಬ ನಕಲಿ ಲಿಂಕ್ ಕಳಿಹಿಸಿದ್ದಾರೆ.ಗಂಗಾಧರ್ ಅದನ್ನು ಕ್ಲಿಕ್ ಮಾಡಿದ ತಕ್ಷಣ ಅವರ ಮೊಬೈಲ್ ಸಂಖ್ಯೆ ಹ್ಯಾಕ್ ಆಗಿ ಅವರ ಮೊಬೈಲ್‌ಗೆ ಬರುವ ಎಲ್ಲ ಕರೆ, ಸಂದೇಶಗಳು ಸೈಬರ್ ವಂಚಕರ ನಂಬರಿಗೆ ಫಾರ್ವರ್ಡ್ ಆಗಿವೆ. ನಂತರ ಅವರ ಖಾತೆಯಿಂದ ಹಂತ, ಹಂತವಾಗಿ ₹1.50 ಲಕ್ಷವನ್ನು ವಂಚಕರು ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಸಂಬಂಧ ರಾಮನಗರ ಸೈಬರ್ ಕ್ರೈಂಗೆ ದೂರು ನೀಡಿದ್ದು, ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *