ಬೆಂಗಳೂರಿನಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ ನಡೆದಿದ್ದು ಮೂವರು ಸವಾರರು ಹಿಟ್ ಅಂಡ್ ನನಗೆ ಬಲಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಅಗಲಕೋಟೆ ಗ್ರಾಮದಲ್ಲಿ ಈ ಒಂದು ಘಟನೆ ಸಂಭವಿಸಿದೆ.ಬೈಕ್ ಸವಾರ ತೌಸಿಫ್ ಸೇರಿದಂತೆ ಮೂವರು ಸವಾರರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.ಬೈಕಿಗೆ ಡಿಕ್ಕಿ ಹೊಡಿಸಿ ಟಿಪ್ಪರ್ ಸಮೇತ ಚಾಲಕ ಪರಾರಿಯಾಗಿದ್ದಾನೆ. ದೇವನಹಳ್ಳಿಯಿಂದ ಬೂದಿಗೆರೆ ರಸ್ತೆಯಲ್ಲಿ ಸವರರು ತೆರಳುತ್ತಿದ್ದರು. ಅದು ವೇಗವಾಗಿ ಬಂದು ಟಿಪ್ಪರ್ ವಾಹನ ಬೈಕಿಗೆ ಡಿಕ್ಕಿ ಹೊಡೆದಿದೆ. ಬೈಕ್ ನಲ್ಲಿ ತೆರಳುತ್ತಿದ್ದ ಮೂವರ ತಲೆಗಳು ಸಂಪೂರ್ಣ ಛಿದ್ರ ಛಿದ್ರವಾಗಿವೆ. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಟಿಪ್ಪರ್ ಚಾಲಕನಿಗಾಗಿ ಶೋಧ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

