Breaking News

ಬಸ್‌ನಿಂದ ಇಳಿಯುವಾಗ ಬಿದ್ದ ಪ್ರಯಾಣಿಕ; ಚಾಲಕ, ನಿರ್ವಾಹಕನ ಮೇಲೆ ಪ್ರಕರಣ ದಾಖಲು

ಕಾರ್ಕಳ: ಬಸ್‌ನಿಂದ ಇಳಿಯುತ್ತಿದ್ದಾಗ ಚಾಲಕ ಏಕಾಏಕಿ ಬಸ್ ಚಲಾಯಿಸಿದ ಪರಿಣಾಮ ಪ್ರಯಾಣಿಕರೊಬ್ಬರು ಬಿದ್ದು ಗಾಯಗೊಂಡ ಘಟನೆ ಸಾಣೂರು ಗ್ರಾಮದ ಮುರತ್ತಂಗಡಿಯಲ್ಲಿ ಸಂಭವಿಸಿದೆ. ಪಡುಕೊಣಾಜೆ ನಿವಾಸಿ ನಿರಂಜನ ಆಳ್ವ (51) ಗಾಯಗೊಂಡವರು. ಇವರು ಜ. 14ರಂದು ಸಂಜೆ ಮೂಡುಬಿದ್ರೆಯಿಂದ ಮುರತ್ತಂಗಡಿಗೆ ಬಸ್‌ನಲ್ಲಿ ಬರುತ್ತಿದ್ದರು.ಮುರತ್ತಂಗಡಿ ನಿಲ್ದಾಣದಲ್ಲಿ ಬಸ್ ಇಳಿಯುತ್ತಿದ್ದಾಗ, ನಿರ್ವಾಹಕ ಸುಧಾಕರ ನೀಡಿದ ಸೂಚನೆಯಂತೆ ಚಾಲಕ ರವಿ ಅಜಾಗರೂಕತೆಯಿಂದ ಬಸ್ ಚಲಾಯಿಸಿದ್ದಾನೆ ಎಂದು ದೂರಲಾಗಿದೆ. ಇದರಿಂದ ಕೆಳಗೆ ಬಿದ್ದ ನಿರಂಜನ ಅವರ ಎಡಗೈ ಭುಜದ ಮೂಳೆ ಮುರಿತವಾಗಿದ್ದು, ಮೂಡುಬಿದ್ರೆಯ ಆಳ್ವಾಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಹೆಂಡತಿಯನ್ನೇ ಅಟ್ಟಾಡಿಸಿಕೊಂಡು ಆಸಿಡ್ ಎರಚಿ, ಮಚ್ಚಿನಿಂದ ಹಲ್ಲೆ ಮಾಡಿದ ಗಂಡ..!

ಬೆಂಗಳೂರು: ಜೆ.ಪಿ.ನಗರ 3ನೇ ಹಂತದ ನಾರಾಯಣ ಕ್ಲೀನಿಕ್ ಬಳಿ ಪತ್ನಿ ಮಧುಮಿತ ಮೇಲೆ ಪತಿ ವೆಂಕಟೇಶ್ ಆಸಿಡ್ ಎರಚಿ, ಮಚ್ಚಿನಿಂದ …

Leave a Reply

Your email address will not be published. Required fields are marked *