Breaking News

ಜೂಜಾಟ: 6 ಜನರ ಮೇಲೆ ಪ್ರಕರಣ ದಾಖಲು

ಯಳಂದೂರು: ತಾಲ್ಲೂಕಿನ ಕೆಸ್ತೂರು ಹೊರವಲಯದ ಕುಂತೂರು ನಾಲೆ ಬಳಿ ಭಾನುವಾರ ರಾತ್ರಿ ಜೂಜಾಟದಲ್ಲಿ ತೊಡಗಿದ್ದ 6 ಜನರ ಮೇಲೆ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.ಪಿಎಸ್‌ಐ ಆಕಾಶ್ ಅವರು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ಕುಂತೂರು ಗ್ರಾಮದ ಮದೇಶ, ಮಹದೇವ, ಬಳೆಪೇಟೆ ಬಸವರಾಜು, ಕೆಸ್ತೂರು ಪ್ರಭುಸ್ವಾಮಿ, ಬಸವಪುರ ರವಿ ಜೂಜಾಟದ ಸಮಯದಲ್ಲಿ ಪೊಲೀಸರ ದಾಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಕೆಸ್ತೂರು ಪ್ರಮೋದ್ ಪರಾರಿಯಾಗಿದ್ದಾರೆ. ಆಟದ ಸ್ಥಳಕ್ಕೆ ತೆರಳಲು ಬಳಸಿದ್ದ 4 ಬೈಕ್ ಹಾಗೂ ಪಣಕ್ಕೆ ಇಟ್ಟಿದ್ದ ₹1,600 ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾಳಿಯಲ್ಲಿ ಪಿಎಸ್‌ಐ ಆಕಾಶ್, ವೃತ್ತ ಕಚೇರಿ ಹೆಡ್ ಕಾನ್‌ಸ್ಟೇಬಲ್‌ಗಳಾದ ಸುಕ್ರನಾಯಕ, ಚನ್ನಯ್ಯ, ಶಿವಮೂರ್ತಿ, ಪ್ರಮೋದ್, ರಂಗಸ್ವಾಮಿ ಭಾಗವಹಿಸಿದ್ದರು.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *