Breaking News

ವಿದ್ಯುತ್ ಕಂಬದ ಮೇಲ್ತಂತಿ ತಗುಲಿ ಟ್ರ್ಯಾಕ್ಟರ್‌ ಸುಟ್ಟು ಭಸ್ಮ..!

ಬಾಗಲಕೋಟೆ : ವಿದ್ಯುತ್ ಕಂಬದ ಮೇಲ್ತಂತಿ ತಗುಲಿ ಕಬ್ಬಿನ ರವದಿ (ಸೊಪ್ಪು) ಸಾಗಿಸ್ತಿದ್ದ ಟ್ರ್ಯಾಕ್ಟರ್‌ಗೆ ಬೆಂಕಿ ಹತ್ತಿರುವ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಟಕ್ಕಳಕಿ-ಸಾವಳಗಿ ಗ್ರಾಮಗಳ‌ ಮಧ್ಯೆ ನಡೆದಿದೆ. ವಸಂತ ಚೌಹಾಣ್ ಎಂಬುವರ ಟ್ರ್ಯಾಕ್ಟರ್ ಇದಾಗಿದ್ದು, ಎಂಜಿನ್,ಟ್ರೇಲರ್ ಎಲ್ಲವೂ ಸುಟ್ಟು ಭಸ್ಮವಾಗಿದೆ.ಬೆಂಕಿ ಆರಿಸಲು ಸ್ಥಳೀಯರು ಹರಸಾಹಸ ಪಟ್ಟಿದ್ದು, ಆದರೆ ವಿಫಲ ಯತ್ನವಾಗಿದೆ. ಹೀಗಾಗಿ ಇನ್ನೂ ಹೆಚ್ಚಾಗಿ ಬೆಂಕಿ ಧಗಧಗಿಸಿದೆ. ಟ್ರ್ಯಾಕ್ಟರ್ ಎಂಜಿನ್ ಟ್ರೇಲರ್ ಹಾಗೂ ಸೊಪ್ಪು ಸೇರಿ 8-9 ಲಕ್ಷ ರೂಪಾಯಿ ನಷ್ಟವಾಗಿದ್ದು, ಈ ಘಟನೆ ಸಾವಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *