Breaking News

ಹೆಜಮಾಡಿಯಲ್ಲಿ ತರಲೆಗೈದ ವಿದ್ಯಾರ್ಥಿಗಳಿದ್ದ ವಾಹನ ಮತ್ತೆ ಪಲ್ಟಿ

ಪಡುಬಿದ್ರಿ: ಹೆಜಮಾಡಿಯಲ್ಲಿ ಟೆಂಪೋವನ್ನು ರಾಷ್ಟ್ರೀಯ ಹೆದ್ದಾರಿ ಮಾರ್ಗ ಮಧ್ಯೆ ನಿಲ್ಲಿಸಿ ಅಸಭ್ಯವಾಗಿ ಸಾರ್ವಜನಿಕರಿಗೆ ಹಾಗೂ ಇತರರ ವಾಹನಗಳಿಗೆ ಅಡ್ಡಿಪಡಿಸಿ ಪ್ರಕರಣವೂ ದಾಖಲಿಸಲ್ಪಟ್ಟಿದ್ದ ಕಾರ್ಕಳ ಮೂಲದ್ದೆನ್ನಲಾದ ಟೆಂಪೋ ಹಂಪಿಗೆ ಹೋಗುವ ದಾರಿ ಮಧ್ಯೆ ಕೂಡ್ಲಿಗೆ ಠಾಣಾ ವ್ಯಾಪ್ತಿಯಲ್ಲಿ ಮಗುಚಿ ಬಿದ್ದು ಅಪಘಾತಕ್ಕೊಳಗಾಗಿದೆ. ವಾಹನದಲ್ಲಿ ಗುರುವಾಯೂರು ಸಮೀಪದ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದು ಇವರ ಶಿಕ್ಷಕರೋರ್ವರ ಕಾಲಿನ ಮೂಳೆಯ ಮುರಿತವುಂಟಾಗಿರುವುದಾಗಿ ತಿಳಿದು ಬಂದಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ರೈಲಿನಲ್ಲಿ ಮಂಗಳೂರಿಗೆ ಬಂದಿದ್ದು ಕಾರ್ಕಳದ ಈ ಟೆಂಪೋ ಮೂಲಕ ತಮ್ಮ ಪ್ರಯಾಣವನ್ನು ಮುಂದುವರಿಸಿದ್ದರು. ಹೆಜಮಾಡಿಯಲ್ಲಿ ತಮ್ಮ ಸಹಪಾಠಿಯೋರ್ವನ ಹುಟ್ಟುಹಬ್ಬವನ್ನು ಪಟಾಕಿ ಸಿಡಿಸಿ ಆಚರಿಸಿಕೊಂಡದ್ದಕ್ಕಾಗಿ ಚಾಲಕನ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *