Breaking News

ಸಾರಾಯಿ ಕುಡಿಬೇಡ ಅಮ್ಮ..’ ಎಂದಿದ್ದಕ್ಕೆ ಮಗಳನ್ನೇ ಕೊಂದ ತಾಯಿ!

ಯಾದಗಿರಿ ಸಾರಾಯಿ ಕುಡಿಯುವುದನ್ನು ಮಗಳು ಆಕ್ಷೇಪಿಸಿದ್ದಕ್ಕೆ ಹೆತ್ತ ತಾಯಿಯೇ ತನ್ನ ಮಗಳ ಕತ್ತು ಹಿಸುಕಿ ಕೊಲೆ ಮಾಡಿರುವ ರಾಕ್ಷಸಿ ಕೃತ್ಯ ಇಲ್ಲಿನ ರಾಜೀವಗಾಂಧಿ ನಗರದಲ್ಲಿ ನಡೆದಿದೆ. ಪ್ರತಿಭಾ (11) ಮೃತ ಬಾಲಕಿ. ಆಕೆಯ ತಾಯಿ ನಿರ್ಮಲಾ ಕೊಲೆ ಆರೋಪಿ.ಮದ್ಯ ಸೇವಿಸುವ ಅಭ್ಯಾಸವಿದ್ದ ನಿರ್ಮಲಾ ಸೋಮವಾರ ಮಧ್ಯಾಹ್ನ ಮನೆಗೆ ಕುಡಿದು ಬಂದಿದ್ದಾಳೆ. ಕುಡಿದು ಬಂದಿದ್ದಕ್ಕೆ ಪ್ರತಿಭಾ ಆಕ್ಷೇಪಿಸಿದ್ದಾಳೆ. ಆಗ ತಾಯಿ ಮಗಳ ನಡುವೆ ವಿಪರೀತ ಜಗಳ ನಡೆದಿದ್ದು ಮೊದಲೇ ಪಾನಮತ್ತಳಾಗಿದ್ದ ನಿರ್ಮಲಾ ಆಕ್ರೋಶಗೊಂಡು, ಮಗಳನ್ನು ಕತ್ತು ಹಿಸುಕಿ ಉದ್ದೇಶಪೂರ್ವಕವಾಗಿ ಕೊಲೆ ಮಾಡಿದ್ದಾಳೆಂದು ದೂರಲಾಗಿದೆ. ಮಗಳನ್ನು ಕೊಲೆ ಮಾಡಿದ ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬಿಂಬಿಸಲು ನಿರ್ಮಲಾ ಯತ್ನಿಸಿದ್ದಾಳೆ. ಪೊಲೀಸರು ತನಿಖೆ ನಡೆಸಿದಾಗ ಬಾಲಕಿ ಕುತ್ತಿಗೆಯಲ್ಲಿ ಬೆರಳಿನ ಗುರುತು ಪತ್ತೆಯಾಗಿದೆ. ಆರೋಪಿಯನ್ನು ವಿಚಾರಿಸಿದಾಗ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ನಾಲ್ವರು ಹೆಣ್ಣು ಮಕ್ಕಳನ್ನು ಹೆತ್ತಿದ್ದ ನಿರ್ಮಲಾಗೆ ಪತಿ ಇರಲಿಲ್ಲ ಎನ್ನಲಾಗಿದೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *