ಕಲಬುರಗಿ: ನಗರ ವ್ಯಾಪ್ತಿಯಲ್ಲಿ ಗುರುವಾರ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಜಫರಾಬಾದ್ ಗ್ರಾಮದ ನಿವಾಸಿ ಸಚಿನ್ ಅಶೋಕ ಸಂಗಾವಿ (28) ಹಾಗೂ ಕಡಣಿ (ಕಣ್ಣಿ) ಗ್ರಾಮದ ನಿವಾಸಿ ಭೀಮಾಶಂಕರ ಪ್ರಕಾಶ ಶಿವರಾಯಗೋಳ (21) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇದೇ ವೇಳೆ ಸಂಚಾರಿ ಪೊಲೀಸ್ ಠಾಣೆ-1ರ ವ್ಯಾಪ್ತಿಯ ನಗರದ ಹೊರವಲಯದ ಶರಣ ಸಿರಸಗಿ ಗ್ರಾಮದ ಸಮೀಪ ಟಂಟಂ ವಾಹನವು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಭೀಮಾಶಂಕರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

