ಬೆಂಗಳೂರು: ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜ.16ರಂದು ನಡೆದಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಶರ್ಮಿಳಾ ಕೊಲೆ ಪ್ರಕರಣದ ಹಿಂದಿನ ಇನ್ನಷ್ಟು ರಹಸ್ಯಗಳು ಹೊರ ಬಿದ್ದಿದ್ದು, ಶವದ ಮೇಲೆಯೂ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ. ಕೇರಳ ದ ಆರೋಪಿ ಕರ್ನಲ್ ಕುರೈ ಪೊಲೀಸರ ವಿಚಾರಣೆ ವೇಳೆ ಇನ್ನಷ್ಟು ಸಂಗತಿಯನ್ನು ಬಿಚ್ಚಿಟ್ಟಿ ದ್ದಾನೆ. ಶರ್ಮಿಳಾ ಫ್ಲಾಟ್ ಗೆ ನುಗ್ಗಿದ್ದ ಆರೋಪಿ, ಆಕೆಯನ್ನು ತಬ್ಬಿ ಹಿಡಿದಾಗ ಆಕೆ ಬೇಡಿಕೊಂಡರೂ ಬಿಟ್ಟಿರಲಿಲ್ಲ. ಸೋಪಾಗೆ ಶರ್ಮಿಳಾ ತಲೆ ತಗುಲಿ ತೀವ್ರ ರಕ್ತಸ್ರಾವವಾಗಿತ್ತು. ಇಷ್ಟಾದರೂ ಶರ್ಮಿಳಾ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ, ಎರಡು ಕೈಯಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದ. ಬಳಿಕ ತಾನೇ ಯುವತಿ ಬಟ್ಟೆ ಬಿಚ್ಚಿ, ಅದೇ ಬಟ್ಟೆಯಿಂದ ರಕ್ತ ಒರೆಸಿ ನೀರಲ್ಲಿ ತೊಳೆದಿದ್ದ. ನಂತರ ಶವದ ಮೇಲೆಯೂ ಅತ್ಯಾಚಾರಕ್ಕೆ ಯತ್ನಿಸಿದ್ದ. ಶರ್ಮಿಳಾ ಕೊಲೆ ಬಳಿಕ ಬೀರುವಿನಲ್ಲಿದ್ದ ಬಟ್ಟೆಗಳನ್ನು ತಂದು ತಾನೇ ಯುವತಿ ಶವಕ್ಕೆ ಹಾಕಿ, ಅಂಗಾತ ಮಲಗಿಸಿದ್ದ. ನಂತರ ಬಟ್ಟೆಗಳನ್ನು ಮಂಚದ ಮೇಲೆ ಇಟ್ಟು ಟಿಶ್ಯು ಪೇಪರ್‌ಗೆ ಬೆಂಕಿ ಹಚ್ಚಿದ್ದ. ಯುವತಿಯ ಪ್ಯಾಂಟ್ ಅನ್ನು ಪಕ್ಕದ ಮನೆಯ ಮರದ ಮೇಲೆ ಎಸೆದು ಹೋಗಿದ್ದ. ಆ ವೇಳೆ ಯುವತಿಯ ಫೋನ್ ಸಹ ತೆಗೆದುಕೊಂಡು ಹೋಗಿದ್ದ ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

