Breaking News

ಗದಗದಲ್ಲಿ ತಂದೆ-ಮಗನ ಆಸ್ತಿ ಕಲಹ ಕೊಲೆಯಲ್ಲಿ ಅಂತ್ಯ!

ಗದಗ:- ಜಿಲ್ಲೆ ಲಕ್ಷ್ಮೇಶ್ವರ ತಾಲ್ಲೂಕಿನ ಗೋವನಾಳ ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ತಂದೆ ಮತ್ತು ಮಗನ ನಡುವೆ ಕಲಹ ನಡೆದಿದೆ. ಶಂಕರಗೌಡ ದ್ಯಾವನಗೌಡ್ರ (56) ಎಂಬ ತಂದೆಯನ್ನು ಪ್ರಭು ಶಂಕರಗೌಡ್ರ (24) ಎಂಬ ಮಗನ ತಲೆ ಮತ್ತು ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಿದ ಪ್ರಕರಣ ದಾಖಲಾಗಿದೆ. ಘಟನೆ ವೇಳೆ ಇಬ್ಬರೂ ಮದ್ಯಪಾನದಲ್ಲಿದ್ದವರು. ಈ ಭೀಕರ ಘಟನೆಯು 2 ಎಕರೆ ಜಮೀನಿನ ಹಕ್ಕು ಕುರಿತು ಉಂಟಾದ ಕಲಹದಿಂದ ಸಂಭವಿಸಿದೆ. ಸ್ಥಳಕ್ಕೆ ಗದಗ ಎಸ್ಪಿ ರೋಹನ್ ಜಗದೀಶ್ ಮತ್ತು ಡಿವೈಎಸ್ಪಿ ಮುರ್ತುಜಾ ಖಾದ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *