ತಮಿಳುನಾಡಿನ ಕರೂರ್ ಜಿಲ್ಲೆಯ ಸೆಮ್ಮಾಡೈ ಬಳಿ ಟ್ರ್ಯಾಕ್ಟರ್ ಹಾಗೂ ಟೂರಿಸ್ಟ್ ವ್ಯಾನ್‌ಗೆ ಓಮ್ನಿ ಬಸ್ ಡಿಕ್ಕಿ ಹೊಡೆದು ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ 15 ಪ್ರಯಾಣಿಕರು ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ ನಾಗರ್‌ಕೋಯಿಲ್‌ಗೆ ಹೊರಟಿದ್ದ ಪ್ರವಾಸಿಗರ ಮಿನಿಬಸ್, ಕರೂರ್-ಸೇಲಂ ಹೆದ್ದಾರಿಯಲ್ಲಿ ವಾಹನ ಬಲಕ್ಕೆ ತಿರುಗಿದ್ದರಿಂದಾಗಿ, ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆಯಿತು. ಆ ಬಳಿಕ ತೂತುಕುಡಿಯಿಂದ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬರುತ್ತಿದ್ದ ಪ್ರವಾಸಿ ವ್ಯಾನ್‌ಗೂ ಒಮ್ನಿ ಬಸ್ ಡಿಕ್ಕಿ ಹೊಡೆದಿದೆ. ಇದರಿಂದಾಗಿ ವ್ಯಾನ್ ಚಾಲಕ ಮೃತಪಟ್ಟಿದ್ದಾನೆ. ಅಪಘಾತದ ತೀವ್ರತೆಗೆ ಒಮ್ನಿ ಬಸ್, ಟ್ರ್ಯಾಕ್ಟರ್ ಮತ್ತು ವ್ಯಾನ್‌ನ ಮುಂಭಾಗವು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

