ದೊಡ್ಡಗಟ್ಟಿಗನಬ್ಬೆ(ಹೊಸಕೋಟೆ): ಇಲ್ಲಿನ ಗೇಟ್ ಸಮೀಪ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಹೊಸಕೋಟೆ ಮತ್ತು ತಿರುಮಶೆಟ್ಟಿಹಳ್ಳಿ ರಸ್ತೆಯಲ್ಲಿ ಕಾರು ಮತ್ತು ಸರಕು ಸಾಗಣೆ ವಾಹನ ನಡುವೆ ಡಿಕ್ಕಿಯಾಗಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತಲ್ಲಿ ಸರಕು ಸಾಗಣೆ ವಾಹನ ಚಾಲಕನ ಬಲಗೈ ಮುರಿದಿದ್ದು, ಉಳಿದ ಇಬ್ಬರಿಗೆ ತಲೆ ಭಾಗಕ್ಕೆ ತೀವ್ರವಾಗಿದೆ ಗಾಯವಾಗಿದೆ. ಗಾಯಾಳುಗಳನ್ನು ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದವರಿಗೆ ಅಪಾಯದಿಂದ ಪಾರಾಗಿದ್ದಾರೆ. ಡಿಕ್ಕಿ ರಭಸಕ್ಕೆ ವಾಹನದ ಮುಂಭಾಗ ಜಖಂಗೊಂಡಿದೆ. ಕಾರಿನ ಒಂದು ಬದಿ ನಜ್ಜುಗುಜ್ಜಾಗಿದೆ. ಹೊಸಕೋಟೆ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೊಡ್ಡಗಟ್ಟಿಗನಬ್ಬೆಗೇಟ್ ಸಮೀಪ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಹೊಸಕೋಟೆ ಮತ್ತು ತಿರುಮಶೆಟ್ಟಿಹಳ್ಳಿ ರಸ್ತೆಯಲ್ಲಿ ಅಪಘಾತಕ್ಕಿಡಾದ ಟಾಟಾ ಎಸಿ
bigtvnews | Hubli Dharwad News | Kannada News | Karnataka News Hubli News | News In Hubli | Local news

