Breaking News

ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ ಕುರಿತು ಕೇಂದ್ರದಿಂದ ಆದೇಶ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ಬೇಡಿಕೆಯಾದ 8ನೇ ವೇತನ ಆಯೋಗ ರಚನೆಗೆ ಕೇಂದ್ರದ ಎನ್‌ಡಿಎ ಮೈತ್ರಿಕೂಟದ ಸರ್ಕಾರ ಇನ್ನೂ ಅಂತಿಮ ಒಪ್ಪಿಗೆ ನೀಡಿಲ್ಲ. ಆದರೆ, ತುಟ್ಟಿಭತ್ಯೆ (ಡಿಎ) ಹೆಚ್ಚಳದ ಕುರಿತು ಮುಂದಿನ ವಾರ ಘೋಷಣೆಯಾಗುವ ನಿರೀಕ್ಷೆ ಇದ್ದು, ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬಕ್ಕೆ ಬಂಪರ್ ಕೊಡುಗೆ ಸಿಗಲಿದೆ.
ಶೇ 3ರಷ್ಟು ಡಿಎ ಹೆಚ್ಚಳವಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ಡಿಎ ಹೆಚ್ಚಳದಿಂದ ಕೇಂದ್ರ ಸರ್ಕಾರಿ ನೌಕರರು, ನಿವೃತ್ತರು ಸೇರಿದಂತೆ ಸುಮಾರು 1 ಕೋಟಿಗೂ ಅಧಿಕ ಜನರಿಗೆ ಅನುಕೂಲವಾಗಲಿದೆ. ಸದ್ಯದ ಮಾಹಿತಿಗಳ ಪ್ರಕಾರ ಅಕ್ಟೋಬರ್ 25ರಂದು ಡಿಎ ಹೆಚ್ಚಳ ಮಾಡುವ ಕುರಿತು ಕೇಂದ್ರ ಸರ್ಕಾರ ಅಧಿಕೃತ ಆದೇಶವನ್ನು ಹೊರಡಿಸಲಿದೆ. ಈ ತಿಂಗಳ ಅಂತ್ಯದಲ್ಲಿ ದೀಪಾವಳಿ ಹಬ್ಬವಿದ್ದು, ಅದಕ್ಕೂ ಮೊದಲೇ ಈ ಘೋಷಣೆಯಾಗಲಿದೆ.
ಸದ್ಯದ ಮಾಹಿತಿ ಪ್ರಕಾರ ಡಿಎ ಶೇ 3ರಷ್ಟು ಏರಿಕೆಯಾಗಲಿದೆ ಆದ್ದರಿಂದ ಒಟ್ಟು ಡಿಎ ಶೇ 53ರಷ್ಟು ಆಗಲಿದೆ. ಸದ್ಯ ನೌಕರರು ಶೇ 50ರಷ್ಟು ಡಿಎ ಪಡೆಯುತ್ತಿದ್ದಾರೆ. ಡಿಎ ಹೆಚ್ಚಳವಾದರೆ ಹಬ್ಬದ ಸಂದರ್ಭದಲ್ಲಿಯೇ ವೇತನ ಹೆಚ್ಚಳವಾಗಿ ಹಬ್ಬದ ಲಕ್ಷ್ಮೀ ಪೂಜೆ ವೇಳೆಗೆ ಹೆಚ್ಚಿನ ವೇತನ ಉದ್ಯೋಗಿಗಳ ಕೈ ಸೇರಲಿದೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *