Breaking News

ವಿಟ್ಲ: ಮನೆಯಲ್ಲಿ ಎಂಡಿಎಂಎ ಮಾರಾಟ; ನಾಲ್ವರ ಬಂಧನ

ಬಂಟ್ವಾಳ ತಾಲೂಕಿನ ನೇರಳಕಟ್ಟೆ ಇಂದಿರಾನಗರದ ಬಾಡಿಗೆ ಮನೆಯೊಂದರಲ್ಲಿ ಮಾದಕ ವಸ್ತುವಾದ ಎಂ.ಡಿ.ಎಂ.ಎ.ಯನ್ನುಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬಂಟ್ವಾಳ ನೆಟ್ಲಮುಡ್ನೂರು ಗ್ರಾಮದ ಭಗವಂತಕೋಡಿ ನಿವಾಸಿ ಅಶ್ರಫ್ ಜಿ. (38) ಸಹಿತ ನಾಲ್ವರನ್ನು ವಿಟ್ಲ ಪೊಲೀಸ್ ಉಪ ನಿರೀಕ್ಷಕ ರತ್ನಕುಮಾರ್ ಎಂ. ನೇತೃತ್ವದ ಪೊಲೀಸ್‌ ತಂಡ ಬಂಧಿಸಿದೆ. ಆರೋಪಿಯು ಹಫೀಝ್‌ ಯಾನೆ ಅಪ್ಪಿ, ಅಫ್ವಾನ್‌ ಮತ್ತು ಅಶ್ರಫ್‌ ಎನ್‌. ಎ. ಅವರೊಂದಿಗೆ ಈ ಮನೆಯಲ್ಲಿದ್ದ. ಮನೆಯಲ್ಲಿ ಪರಿಶೀಲಿಸಿದಾಗ ಒಟ್ಟು 17.97 ಗ್ರಾಂ ತೂಕದ 1,79,700 ರೂ. ಅಂದಾಜು ಮೌಲ್ಯದ ಎಂ.ಡಿ.ಎಂ.ಎ. ಮಾದಕವಸ್ತು, ಚೂರಿ ಹಾಗೂ ಇತರ ಸೊತ್ತುಗಳು ಪತ್ತೆಯಾಗಿವೆ. ಅವುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ನಾಲ್ವರು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

Share News

About BigTv News

Check Also

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಸಿಕ್ಕಿಬಿದ್ದ: ಸ್ನೇಹಿತರ ಸಮೇತ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್, …

Leave a Reply

Your email address will not be published. Required fields are marked *