Breaking News

ಶ್ರೀನಗರ: ಭಯೋತ್ಪಾದಕನ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯ ಬಳಿ ಒಳನುಸುಳಲು ಪ್ರಯತ್ನಿಸುತ್ತಿದ್ದ ಪಾಕಿಸ್ತಾನದ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ ಎಂದು ಸೇನೆ ಭಾನುವಾರ ತಿಳಿಸಿದೆ. ‘ಪೊದೆಯಲ್ಲಿ ಭಯೋತ್ಪಾದಕನ ಅನುಮಾನಾಸ್ಪದ ಚಲನವಲನಗಳನ್ನು ಸೈನಿಕರು ಗಮನಿಸಿದ್ದಾರೆ. ಒಳನುಸುಳುವಿಕೆ ಪ್ರಯತ್ನದ ಕುರಿತು ಖಚಿತ ಗುಪ್ತಚರ ಮಾಹಿತಿಯ ಮೇರೆಗೆ ಜಂಟಿ ತಂಡವು ಮಾರ್ಚ್‌ 14- 15ರ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿದೆ’ ಎಂದು ಸೇನೆ ತಿಳಿಸಿದೆ. ಸೇನೆ ಮತ್ತು ಭಯೋತ್ಪಾದಕನ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಭಯೋತ್ಪಾದಕ ಮೃತಪಟ್ಟಿದ್ದಾನೆ. ಆತನ ಬಳಿ ಇದ್ದ ಎಕೆ ರೈಫಲ್‌, ಪಿಸ್ತೂಲ್‌ ಮತ್ತು ಬೃಹತ್‌ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅದು ತಿಳಿಸಿದೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *