ಯಾದಗಿರಿ : ಜಿಲ್ಲೆಯ ಗೋನಾಳ ಗ್ರಾಮದಲ್ಲಿ ಇತ್ತೀಚೆಗೆ ನಡೆದ ವೃದ್ಧನ ಹತ್ಯೆ ಪ್ರಕರಣವು ಅನಿರೀಕ್ಷಿತ ತಿರುವು ಪಡೆದಿದ್ದು, ಪರಸ್ತ್ರಿ ಜೊತೆಗೆ ತಂದೆಯ ಅನೈತಿಕ ಸಂಬಂಧದಿಂದ ಬೇಸತ್ತ ಮಗನೇ ಈ ಕೃತ್ಯದ ಸೂತ್ರಧಾರ ಎಂದು ತಿಳಿದುಬಂದಿದೆ. ಮೃತ ಹಂಪಣ್ಣ ಸಜ್ಜನ್ ಎಂಬುವವರು ಅಗಾಧ ಆಸ್ತಿ ಹೊಂದಿದ್ದರೂ, ಮದ್ಯ ಹಾಗೂ ಪರಸ್ತ್ರೀಯರ ವ್ಯಾಮೋಹಕ್ಕೆ ಬಿದ್ದು ಸೊಸೆ ಸೇರಿದಂತೆ ಮನೆಯವರ ಮಾನಕ್ಕೆ ಧಕ್ಕೆ ತರುತ್ತಿದ್ದರು. ಈ ಅವಮಾನವನ್ನು ಸಹಿಸದ ಮಗ ನರಸರೆಡ್ಡಿ, ಎರಡೂವರೆ ಲಕ್ಷ ರೂಪಾಯಿ ನೀಡಿ ಬಾಡಿಗೆ ಹಂತಕರ ಮೂಲಕ ಈ ಕೊಲೆಯನ್ನು ಮಾಡಿಸಿದ್ದಾನೆ. ಪೊಲೀಸರ ತನಿಖೆಯ ವೇಳೆ ಮೃತನ ಮೊಬೈಲ್‌ನಲ್ಲಿದ್ದ ಆಕ್ಷೇಪಾರ್ಹ ಚಿತ್ರಗಳು ಈ ರಹಸ್ಯವನ್ನು ಬಯಲು ಮಾಡಿವೆ. ಈ ಕೃತ್ಯದ ನಂತರ ಯಾವುದೂ ಅರಿಯದವನಂತೆ ಕಣ್ಣೀರು ಹಾಕಿದ್ದ ಮಗ ಹಾಗೂ ಆತನಿಗೆ ಸಹಕರಿಸಿದ ನಾಲ್ವರು ಆರೋಪಿಗಳನ್ನು ವಡಗೇರಾ ಪೊಲೀಸರು ಈಗ ಬಂಧಿಸಿದ್ದಾರೆ. ಕೇವಲ ಆಸ್ತಿಗಾಗಿ ನಡೆದ ಹತ್ಯೆ ಎಂದು ಭಾವಿಸಿದ್ದ ಈ ಕೇಸ್, ಈಗ ಕಾಮಪ್ರಚೋದಿತ ವರ್ತನೆಯಿಂದ ಉಂಟಾದ ಕೌಟುಂಬಿಕ ದುರಂತವಾಗಿ ಬದಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

