ಕೋಲಾರ: ಸಿಲಿಂಡರ್ ಸ್ಪೋಟಗೊಂಡು ಒಂದು ಅಂತಸ್ತಿನ ಮನೆ ಕುಸಿತಗೊಂಡು ಮನೆಯಲ್ಲಿದ್ದ 12 ವರ್ಷದ ಬಾಲಕಿಯೊಬ್ಬಳು ಮೃತಪಟ್ಟು, ನಾಲ್ವರಿಗೆ ಗಾಯಗಳಾದ ಘಟನೆ ಜಿಲ್ಲೆಯ ಮುಳಬಾಗಿಲು ನಗರದ ಜಹಾಂಗಿರ್ ಮೊಹಲ್ಲಾದಲ್ಲಿ ಮಾ.25ರ ಬುಧವಾರ ನಡೆದಿದೆ. ಸುಹೇಲ್-ಕೌಸರ್ ದಂಪತಿಯ ಪುತ್ರಿ ಮಾಹಿನ್ (12) ಸಾವನ್ನಪಿದ ಬಾಲಕಿ. ಮನೆಯಲ್ಲಿದ್ದ ಸುಹೇಲ್, ಕೌಸರ್, ಉಜೇರ್, ಆಯನ್ ಎಂಬ ನಾಲ್ವರಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಬುಧವಾರ ಬೆಳಗ್ಗೆ 5.30 ಗಂಟೆ ವೇಳೆಗೆ ಅಡುಗೆಗೆ ಗ್ಯಾಸ್ ಹಚ್ಚಿದಾಗ ಸಿಲಿಂಡರ್ ಸ್ಪೋಟಗೊಂಡಿದ್ದು, ಸಿಲಿಂಡರ್ ಸ್ಪೋಟದ ರಭಸಕ್ಕೆ ಮನೆ ಕುಸಿದಿದೆ ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಗಾಯಾಳುಗಳನ್ನು ರಕ್ಷಿಸಿದ್ದಾರೆ. ಮುಳಬಾಗಿಲು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

