ಚಿತ್ರದುರ್ಗ: ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷರಾಗಿ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷರಾಗಿ ಚಾಮರಸ ಮಾಲಿಪಾಟೀಲ, ಪ್ರಧಾನ ಕಾರ್ಯದರ್ಶಿಯಾಗಿ ರವಿಕಿರಣ್ ಪೂಣಚ್ಚ ಹಾಗೂ ಉಪಾಧ್ಯಕ್ಷರಾಗಿ ಕೆ.ಪಿ.ಭೂತಯ್ಯ ಪುನರಾಯ್ಕೆಯಾದರು.
ಇಲ್ಲಿ ನಡೆದ ಸಂಘದ ರಾಜ್ಯ ಘಟಕದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಪ್ರಧಾನ ಕಾರ್ಯದರ್ಶಿಯಾಗಿ ಎನ್.ಡಿ.ವಸಂತಕುಮಾರ್, ಕಾರ್ಯಾಧ್ಯಕ್ಷರಾಗಿ ಜೆ.ಎಂ.ವೀರಸಂಗಯ್ಯ, ಎ.ಗೋವಿಂದರಾಜು ಮತ್ತು ಎ.ಎಂ.ಮಹೇಶ್‌ಪ್ರಭು ಆಯ್ಕೆಯಾದರು.
ಖಜಾಂಚಿಯಾಗಿ ಪ್ರಸನ್ನ ಎನ್.ಗೌಡ, ಕಾರ್ಯದರ್ಶಿಗಳಾಗಿ ಗೋಪಾಲ ಪಾಪೇಗೌಡ, ಅರುಣ್‌ಕುಮಾರ್ ಕುರುಡಿ, ಸೂಗೂರಯ್ಯ ಎಸ್.ಮಠ, ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೀಗೋಣಿ ಬಸಪ್ಪ, ಶಿವಾನಂದ ಇಟಗಿ, ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೇರಿ 11 ಮಂದಿ ಆಯ್ಕೆ ಮಾಡಲಾಯಿತು. ವರಿಷ್ಠ ಸಮಿತಿಯಲ್ಲಿ ಸುನೀತಾ ಪುಟ್ಟಣ್ಣಯ್ಯ ಅವರನ್ನು ಮುಂದುವರಿಸಲಾಯಿತು.
ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ ನಾಗರತ್ನಮ್ಮ ವಿ.ಪಾಟೀಲ, ಪ್ರಧಾನ ಕಾರ್ಯದರ್ಶಿಗಳಾಗಿ ನೇತ್ರಾವತಿ, ರಮ್ಯಾ ರಾಮಣ್ಣ, ಕಾರ್ಯಾಧ್ಯಕ್ಷರಾಗಿ ಯದುಶೈಲ ಸಂಪತ್, ಉಪಾಧ್ಯಕ್ಷರಾಗಿ ಶಾಂತಮ್ಮಬಾಯಿ, ಪ್ರೇಮಾ ಕಂದಗಾಲ, ಕಾರ್ಯದರ್ಶಿಗಳಾಗಿ ಮಮತಾ ಹಾಗೂ ರತ್ನಮ್ಮ ಆಯ್ಕೆಯಾದರು.
ಸಂಘವನ್ನು ಸೈದ್ಧಾಂತಿಕವಾಗಿ ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ನಿರ್ಧಾರ ಕೈಗೊಂಡಿದ್ದೇವೆ. 12 ಅಂಶಗಳ ಮುನ್ನೋಟ ರೂಪಿಸಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 100 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಈಗಿನಿಂದಲೇ ಸಿದ್ಧತೆ ಆರಂಭಿಸುತ್ತೇವೆ. ಪ್ರತಿ ಹಳ್ಳಿಯಲ್ಲಿ ಸಂಘದ ಘಟಕ ಸ್ಥಾಪಿಸುತ್ತೇವೆ ಎಂದು ಬಡಗಲಪುರ ನಾಗೇಂದ್ರ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

