Breaking News

ಮಚ್ಚು ಹಿಡಿದು ಅಣ್ಣಮ್ಮ ಸಾಂಗ್​ಗೆ ರೌಡಿಶೀಟರ್ ಡ್ಯಾನ್ಸ್ : ಇಬ್ಬರ ಬಂಧನ!

ಬೆಂಗಳೂರು: ನಗರದ ಬ್ಯಾಟರಾಯನಪುರದಲ್ಲಿ ರೌಡಿಶೀಟರ್‌ರೊಬ್ಬರ ಮಚ್ಚು ಹಿಡಿದು ಡ್ಯಾನ್ಸ್ ಮಾಡಿದ ವೀಡಿಯೋ ವೈರಲ್ ಆದ ಬಳಿಕ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ರಂಜಿತ್ ಅಲಿಯಾಸ್ ರಂಜು ಮತ್ತು ನಂದೀಶ್. ವೀಡಿಯೋದಲ್ಲಿ ದೇವಿಯ ಹಾಡಿಗೆ ಎಣ್ಣೆ ಪಾರ್ಟಿಯಲ್ಲಿ ಮಚ್ಚು ಹಿಡಿದು ಸ್ಟೆಪ್ಸ್ ಹಾಕುತ್ತಿರುವ ದೃಶ್ಯಗಳು ಕಾಣುತ್ತಿದೆ. ವೀಡಿಯೋ ವೈರಲ್ ಆದ ಕೂಡಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಂಜಿತ್ ಅವರ ವಿರುದ್ಧ ರಾಜರಾಜೇಶ್ವರಿ ಠಾಣೆಯಲ್ಲಿ ಈಗಾಗಲೇ ಹಲವು ಪ್ರಕರಣಗಳಿವೆ, ಕೊಲೆ ಪ್ರಕರಣವೂ ಸೇರಿದೆ. ಆರೋಪಿಗಳು ವೀಡಿಯೋ ಹಳೆಯದು ಎಂದು ಹೇಳಿದ್ದರೂ, ಪೊಲೀಸರು ಗಂಭೀರವಾಗಿ ಪರಿಗಣಿಸಿ ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *