ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಅಡಿಯಲ್ಲಿ ತಯಾರಾಗುತ್ತಿರುವ ನೆಹರು ಮೈದಾನವನ್ನು ಬೆಳ್ಳಂಬೆಳಗ್ಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳಾಗಡ್ಡಿ ಸಮೀಕ್ಷೆ ಮಾಡಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಈಗಾಗಲೇ ಅಲ್ಪ ಪ್ರಮಾಣದಲ್ಲಿ ತಯಾರಾದ ನೆಹರು ಮೈದಾನಕ್ಕೆ ದಿನಂಪ್ರತಿ ವಾಕಿಂಗ್ ಮಾಡಲು ನೂರಾರು ಜನರು ಬರುತ್ತಿದ್ದಾರೆ. ಬೆಳಗಿನ ಜಾವ ಕ್ರೀಡಾ ಪ್ರೇಮಿಗಳು, ಕ್ರಿಕೆಟ್, ವಾಲಿಬಾಲ್, ಫುಟ್‌ಬಾಲ್ ಮುಂತಾದ ದೈನಂದಿನ ಚಟುವಟಿಕೆಗಳಿಗೆ ಮೈದಾನಕ್ಕೆ ಆಗಮಿಸಲು ಪ್ರಾರಂಭಿಸಿದ್ದಾರೆ. ಆದರೆ ಒಂದು ವರ್ಷದ ಕೆಲಸದ ನಂತರ ಸಾಕಷ್ಟು ಕಲ್ಲುಗಳು, ಧೂಳು ಮತ್ತು ಅನಗತ್ಯ ತ್ಯಾಜ್ಯಗಳು ಮೈದಾನದಲ್ಲಿ ಬಿದ್ದಿವೆ. ಈ ಉದ್ದೇಶಕ್ಕಾಗಿ ಎಲ್ಲಾ ಕ್ರೀಡಾ ಪ್ರೇಮಿಗಳು ಎಚ್‌ಡಿಎಂಸಿ ಕಮಿಷನರ್‌ಗೆ ಮೌಖಿಕ ದೂರುಗಳನ್ನು ನೀಡಿದರು.
24 ಗಂಟೆಯೊಳಗೆ ಸ್ವತಃ ತಾವೇ ಮೈದಾನಕ್ಕೆ ಭೇಟಿ ನೀಡಿ ಮೈದಾನವನ್ನು ಸ್ವಚ್ಛಗೊಳಿಸುವ ಭರವಸೆ ನೀಡಿದ್ದು, ಆದಷ್ಟು ಬೇಗ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಬೆಳಗ್ಗೆಯೇ ತಾಕೀತು ಮಾಡಿದರು. ಎಲ್ಲಾ ಕ್ರೀಡಾ ಪ್ರೇಮಿಗಳು ಕಮಿಷನರ್ ಅವರಿಗೆ ಭರವಸೆ ನೀಡಿದ ಕೆಲಸಕ್ಕಾಗಿ ಧನ್ಯವಾದಗಳು ಅರ್ಪಿಸಿದರು.ಈ ಸಂದರ್ಭದಲ್ಲಿ ಬ್ಲೂಮರ್ಸ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರಾದ ಪ್ರಕಾಶ್ ಜೈನ್, ಮನೀಶ್ ಕೊಠಾರಿ, ಎಸಿಪಿ ಸಂಚಾರ ವಿನೋದ್ ಮುಕೇದಾರ, ದಿನೇಶ್ ರಾಥೋಡ್, ಸುಶೀಲ್ ಜೈನ್, ನಿತೇಶ್ ಭೂರತ್, ಸುರೇಶ್ ಸಿ.ಜೈನ್ ಮತ್ತಿತರರಿದ್ದರು
bigtvnews | Hubli Dharwad News | Kannada News | Karnataka News Hubli News | News In Hubli | Local news





