Breaking News

ಹುಬ್ಬಳ್ಳಿಯಲ್ಲಿ ಪೊಲೀಸರ ಮೇಲೆ ಪುಡಾರಿಗಳಿಂದ ಹಲ್ಲೆ; ನಾಲ್ವರ ಬಂಧನ

ಹುಬ್ಬಳ್ಳಿ: ಎಸ್.ಎಂ.ಕೃಷ್ಣ ನಗರದ ಸ್ಮಶಾನಗಟ್ಟಿಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಚಾಕು ಇರಿದು ಕೊಲೆಗೆ ಯತ್ನಿಸಿದ್ದೂ ಅಲ್ಲದೆ, ಮೂವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕಸಬಾಪೇಟೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಕಾನ್‌ಸ್ಟೆಬಲ್ ಎಸ್.ಎಸ್.ಮೇಟಿ ಅವರು ಚಾಕು ಇರಿತದಿಂದ ಗಾಯಗೊಂಡಿದ್ದು ಕೆಎಂಸಿ-ಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಚ್.ಆರ್. ರಾಮಾಪುರ, ರಮಣ ಜೆ ಮತ್ತು ಪಿ.ಕೆ.ಚಲವಾದಿ ಮೇಲೆ ಹಲ್ಲೆ ನಡೆದಿದೆ. ಈಶ್ವರ ನಗರದ ನಿವಾಸಿಗಳಾದ ಅಯಾನ್ ರಫೀಕ್, ಸಮೀರ್, ತೌಫಿಕ್ ಮತ್ತು ವಿನಾಯಕ ಬಂಧಿತ ಆರೋಪಿಗಳು. ಪೊಲೀಸರು ರಾತ್ರಿ ಗಸ್ತಿನಲ್ಲಿ ಇದ್ದಾಗ ಸ್ಮಶಾನದಲ್ಲಿ ಕೆಲವು ಯುವಕರು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದರು. ಅವರನ್ನು ವಿಚಾರಿಸಲು ತೆರಳಿದಾಗ ನಾಲ್ವರು ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ‌.

Share News

About BigTv News

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *