Breaking News

₹1.50 ಲಕ್ಷ ವಂಚನೆ: ಪ್ರಕರಣ ದಾಖಲು

ಪಡುಬಿದ್ರಿ: ವಾಟ್ಸ್‌ಆಯಪ್ ಹಾಗೂ ಟೆಲಿಗ್ರಾಂ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಪ್ರೇರೇಪಿಸಿ ಹಣ ವಂಚಿಸಿದ ಪ್ರಕರಣ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಚೈತ್ರಾ ಎಂಬುವವರನ್ನು ನಿಶಾ ವರ್ಮಾ ಹಾಗೂ ರಾಕೇಶ್ ಪರದಸಾನಿ ಎಂಬವರು ವಾಟ್ಸ್‌ಆಯಪ್ ಮೂಲಕ ಸಂಪರ್ಕಿಸಿ, ಟೆಲಿಗ್ರಾಂ ಲಿಂಕ್ ಕಳುಹಿಸಿ ಮಿಂಟ್ ಎಂಬ ಶೇರಿಂಗ್ ಅಕೌಂಟ್ ತೆರೆಯಲು ಸೂಚಿಸಿದ್ದರು. ಆರೋಪಿಗಳ ಮಾತು ನಂಬಿದ ಚೈತ್ರಾ ಖಾತೆ ತೆರೆದಿದ್ದು, 2026ರ ಮಾರ್ಚ್ 19 ರಂದು ಹಂತ ಹಂತವಾಗಿ ಒಟ್ಟು ₹1.50 ಲಕ್ಷ ಹಣವನ್ನು ಹೂಡಿಕೆ ಮಾಡಿದ್ದರು. ನಂತರ ಅನುಮಾನಗೊಂಡು ತಮ್ಮ ಹೂಡಿಕೆ ಹಣವನ್ನು ಹಿಂತಿರುಗಿಸಲು ಕೇಳಿದಾಗ, ಆರೋಪಿಗಳು ಹಣವನ್ನಾಗಲಿ ಲಾಭಾಂಶವನ್ನಾಗಲಿ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *