Breaking News

ಪಿರಿಯಾಪಟ್ಟಣ: ನವಜಾತ ಹೆಣ್ಣು ಶಿಶು ಮೃತದೇಹ ಪತ್ತೆ

ಪಟ್ಟಣದ ಒಳಕೋಟೆ, ಉಪ್ಪಾರಗೇರಿ ಹತ್ತಿರ ಇರುವ ದೊಡ್ಡಕೆರೆಯ ಸೋಪಾನ ಕಟ್ಟೆಯ ಮೇಲೆ ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆಯಾಗಿದೆ. ಭಾನುವಾರ ಬೆಳಗ್ಗೆ 10 ಗಂಟೆ ಸಮಯದಲ್ಲಿ ಸ್ಥಳೀಯ ವ್ಯಕ್ತಿ ರವಿ ಎಂಬುವರು ತಮ್ಮ ಜಮೀನಿನ ಕಡೆ ಹೋಗುತ್ತಿದ್ದ ವೇಳೆ, ಸಾರ್ವಜನಿಕರು ಬಟ್ಟೆ ತೊಳೆಯುವ ಮೆಟ್ಟಿಲುಗಳ ಹತ್ತಿರ ನೀರಿನಲ್ಲಿ ನವಜಾತ ಶಿಶುವಿನ ಮೃತದೇಹ ತೇಲಾಡುತ್ತಿದ್ದನ್ನು ಕಂಡಿದ್ದಾರೆ. ಸುಮಾರು 6-7 ತಿಂಗಳಿನ ಹೆಣ್ಣು ನವಜಾತ ಶಿಶುವಾಗಿದ್ದು, ಅಪರಿಚಿತರು ತಂದು ಕೆರೆಯಲ್ಲಿ ಹಾಕಿ ಹೋಗಿದ್ದಾರೆ. ನವಜಾತ ಶಿಶು ಯಾರದ್ದು ಎಂಬುದು ತಿಳಿದಿರುವುದಿಲ್ಲ. ಮೃತ ಶಿಶುವಿನ ವಾರಸುದಾರರನ್ನು ಪತ್ತೆ ಮಾಡುವಂತೆ ಸ್ಥಳೀಯ ನಿವಾಸಿ ರವಿ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ತನಿಖೆ ಕೈ ಗೊಂಡಿದ್ದಾರೆ.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *