ಬಂಟ್ವಾಳ: ಮಡಂತ್ಯಾರಿನಿಂದ ಬಿ.ಸಿ. ರೋಡ್ ಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆಯ ಕತ್ತಿನಲ್ಲಿದ್ದ 18 ಗ್ರಾಂ. ತೂಕದ 2.50 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಳ್ಳತನವಾಗಿದೆ. ಬೆಳ್ತಂಗಡಿಯ ಪಾಪುಂಜ ಮನೆಯ ಸರಸ್ವತಿ ಅವರು ಕೆಎಸ್ ಆರ್ ಟಿಸಿ ಬಸ್ ನಲ್ಲಿ ಸಂಚರಿಸುತ್ತಿದ್ದರು. ಬಸ್ಸಿನಲ್ಲಿ ರಷ್ ಇದ್ದ ಕಾರಣ ನಿಂತುಕೊಂಡೇ ಪ್ರಯಾಣಿಸಿದ್ದು , ಬಿ.ಸಿ.ರೋಡ್ ನಲ್ಲಿ ಬಸ್ ನಿಂದ ಇಳಿಯುವಾಗ ಚಿನ್ನದ ಸರ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಸರ ಕಳ್ಳತನ ಆಗಿರಬಹುದು ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

