Breaking News

ಲಾಡ್ಜ್ ರೂಮಿನಿಂದ 1.40 ಲಕ್ಷ ರೂ. ಮೌಲ್ಯದ ಚಿನ್ನದ ಬ್ರೇಸ್ಲೆಟ್ ಕಳವು

ಮಂಗಳೂರು: ಪ್ರವಾಸಕ್ಕೆಂದು ಬಂದು ಬಿಜೈಯ ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದ ಆಂಧ್ರಪ್ರದೇಶ ಅನಂತರಪುರ ಮೂಲದ ಕುಟುಂಬವೊಂದಕ್ಕೆ ಸಂಬಂಧಿಸಿದ ಸುಮಾರು 10 ಗ್ರಾಂ. ತೂಕದ 1.40 ಲಕ್ಷ ರೂ. ಮೌಲ್ಯದ ಚಿನ್ನದ ಬ್ರಾಸ್ ಲೆಟ್ ಕಳವಾಗಿದೆ. ಕುಟುಂಬದ ಮುಖ್ಯಸ್ಥ ಎ.ಎನ್. ಶಿವ ನೀಡಿದ ದೂರಿನಂತೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಎ.13ರಂದು ಬೆಳಗ್ಗೆ 6.30ರಿಂದ ಬಿಜೈ ಕೆಎಸ್ ಆರ್ ಟಿಸಿ ಬಸ್ಸು ನಿಲ್ದಾಣದ ಲಾಡ್ಜ್‌ನಲ್ಲಿ ತಂಗಿದ್ದು, ಎ.15ರಂದು ಬೆಳಗ್ಗೆ 8.30ಕ್ಕೆ ತಣ್ಣೀರು ಬಾವಿ ಬೀಚ್ ಗೆ ಹೋಗಿದ್ದರು. ಈ ವೇಳೆ ಬ್ಯಾಗ್ ನ ಒಳಗಡೆ ಒಂದು ಲ್ಯಾಪ್ ಟಾಪ್, ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ಚಿನ್ನದ ಒಡವೆಗಳಾದ ಮಕ್ಕಳ ಎರಡು ಉಂಗುರ, ಪತ್ನಿಯ ಒಂದು ಉಂಗುರ ಮತ್ತು ದೂರುದಾರರ ಬ್ರಾಸ್ ಲೆಟ್ ಇಟ್ಟು ಲಾಕ್ ಮಾಡಿ ಕೀ ತೆಗೆದುಕೊಂಡು ಹೋಗಿದ್ದಾರೆ. ಬೆಳಗ್ಗೆ 11.30ಕ್ಕೆ ಮರಳಿ ಬಂದು ನೋಡಿದಾಗ ಬ್ಯಾಗ್ ನಲ್ಲಿ ಇದ್ದ ಸೊತ್ತುಗಳ ಪೈಕಿ ಚಿನ್ನದ ಒಡವೆಗಳನ್ನು ಇರಿಸಿದ್ದ ಪ್ಲಾಸ್ಟಿಕ್ ಬಾಕ್ಸ್ ನಿಂದ ಬ್ರಾಸ್ ಲೆಟ್ ಕಣ್ಮರೆಯಾಗಿತ್ತು. ಉಳಿದ ವಸ್ತುಗಳು ಯಥಾ ಸ್ಥಿತಿಯಲ್ಲಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಯಾರೋ ನಕಲಿ ಕೀ ಮೂಲಕ ರೂಮಿನ ಬಾಗಿಲು ತೆಗೆದು ಬ್ರಾಸ್ ಲೆಟ್ ಕಳವು ಮಾಡಿರುವ ಸಾಧ್ಯತೆ ಇದೆ ಎಂದು ದೂರಿನಲ್ಲಿತಿಳಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *