Breaking News

ಕಚೇರಿಯಲ್ಲಿ ಯುವತಿಯರ ಮೇಲೆ ಮತಾಂತರಕ್ಕೆ ಒತ್ತಡ ಹೇರುತ್ತಿದ್ದ ಮುಸಲ್ಮಾನನ ಬಂಧನ !

ನಾಗ್ಪುರ – ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಇಸ್ಲಾಂ ಧರ್ಮವನ್ನು ಪಾಲಿಸುವಂತೆ ರಿಯಾಜ್ ಖಾಜಿ ಎಂಬಾತ ಅಲ್ಲಿನ ಯುವತಿಯರ ಮೇಲೆ ಒತ್ತಡ ಹೇರಿ ಬೆದರಿಕೆ ಹಾಕಿದ್ದನು. ಈ ಸಂಬಂಧ ಪೊಲೀಸರು ರಿಯಾಜ್‌ನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯವು ಆತನನ್ನು ಏಪ್ರಿಲ್ 23 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ರಿಯಾಜ್ ಜೊತೆ ಬೇರೆ ಯಾರಾದರೂ ಶಾಮೀಲಾಗಿದ್ದರೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಆತ ‘ಫಿಕರ್ ಫೌಂಡೇಶನ್’ ಮತ್ತು ‘ಪಢೇ ಹಮ್ ಪಢಾಯೇ ಹಮ್’ ಹೆಸರಿನ ಸ್ವಯಂಸೇವಾ ಸಂಸ್ಥೆಗಳನ್ನು (NGO) ನಡೆಸುತ್ತಿದ್ದಾನೆ. ಆತ 2 ವರ್ಷಗಳ ಹಿಂದೆ ಕಚೇರಿಯಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದನು. ರಿಯಾಜ್ ಯಾವಾಗಲೂ ‘ತನ್ನ ಧರ್ಮ ಎಷ್ಟು ಒಳ್ಳೆಯದು’ ಎಂದು ಹೇಳುತ್ತಿದ್ದನು. ಆತನ ವರ್ತನೆಯಿಂದ ಬೇಸತ್ತು ಕೆಲ ಯುವತಿಯರು ಕೆಲಸವನ್ನೂ ಬಿಟ್ಟಿದ್ದರು. ಕೆಲವು ದಿನಗಳ ಹಿಂದೆ ಆತ, ಕೆಲಸ ಬಿಟ್ಟು ಹೋಗಿದ್ದ ಯುವತಿಯೊಬ್ಬಳ ತಾಯಿಯನ್ನು ಸಂಪರ್ಕಿಸಿದ್ದನು. ಆತ ಇತರ ಹುಡುಗಿಯರ ಬಗ್ಗೆ ಆಕ್ಷೇಪಾರ್ಹ ಭಾಷೆಯನ್ನು ಬಳಸುತ್ತಿದ್ದನು. ಈ ವಿಚಾರ ತಿಳಿದ ನಂತರ ಯುವತಿಯರು ಪೊಲೀಸರಿಗೆ ದೂರು ನೀಡಿದ್ದಾರೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *