ಬೆಂಗಳೂರು: ನಗರದಲ್ಲಿ ಹೃದಯವಿದ್ರಾವಕ ಘಟನೆ ಒಂದು ಬೆಳಕಿಗೆ ಬಂದಿದೆ. ಪ್ರಿಯತಮೆಯೇ ಪ್ರಿಯಕರನಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕ ಕಿರಣ್, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.ಆಸ್ಪತ್ರೆ ಬಳಿ ಕಿರಣ್ ಕುಟುಂಬದವರು ಹಾಗೂ ಸಂಬಂಧಿಕರು ಕಣ್ಣೀರಿನಲ್ಲಿ ಮುಳುಗಿದ್ದಾರೆ. ಕಿರಣ್ ತನ್ನ ತಂದೆ-ತಾಯಿಗೆ ಏಕೈಕ ಮಗನಾಗಿದ್ದನು. “ಈ ರೀತಿ ಸುಟ್ಟು ಹಾಕೋದು ಎಷ್ಟು ಸರಿ? ಈಗ ನಮ್ಮ ಮಗನಿಲ್ಲದೆ ನಾವು ಹೇಗೆ ಬದುಕಬೇಕು?” ಎಂದು ಪೋಷಕರು ದುಃಖದಿಂದ ಕಂಗಾಲಾಗಿದ್ದಾರೆ.
ಆರಂಭದಲ್ಲಿ ಕಿರಣ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿಸಿದ್ದರಿಂದ, ಯುವಕನ ತಾಯಿ ಸ್ವಲ್ಪ ಧೈರ್ಯದಲ್ಲಿದ್ದರು. ಆದರೆ ಮಗ ಮೃತ ಪಟ್ಟಿದ್ದಾನೆ ಎಂಬ ಸುದ್ದಿ ತಿಳಿದ ತಕ್ಷಣವೇ ಅವರು ಮನೋವ್ಯಥೆಯಿಂದ ಕುಗ್ಗಿಹೋಗಿದ್ದಾರೆ. ಈ ಘಟನೆ ಕುಟುಂಬವನ್ನು ಮಾತ್ರವಲ್ಲ, ಸಂಬಂಧಿಕರು ಹಾಗೂ ಸ್ಥಳೀಯರನ್ನು ಸಹ ಆಘಾತಕ್ಕೀಡು ಮಾಡಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

