Breaking News

ಮನೆ ಕೆಲಸದವಳಾಗಿ ಬಂದ ಖತರ್ನಾಕ್ ಕಳ್ಳಿಯ ಬಂಧನ!

ಆಶುತೋಷ್ ಮತ್ತು ಪೂಜನ್ ದಿವೇದಿ ಅವರ ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆ ಕಳೆದ ಜುಲೈನಲ್ಲಿ ವಾಟ್ಸಾಪ್ ಗ್ರೂಪ್ ರೆಫರೆನ್ಸ್ ಮೂಲಕ ಮನೆಗೆಲಸಕ್ಕೆ ಸೇರಿಕೊಂಡಿದ್ದಳು.ನೇಪಾಳದ ಮೂಲದ ಪೂಜಾ(26) ಬಂಧಿತ ಮಹಿಳೆ.ಜುಲೈನಲ್ಲಿ ಕೊನೆಯ ಬಾರಿ ಆಭರಣ ನೋಡಿದ್ದ ಮಾಲೀಕರು ಅದಾದ ಬಳಿಕ ಮೂರು ಜನ ಮನೆಗೆಲಸದವರು ಕೆಲಸ ಮಾಡಿದ್ದರು. ಪೊಲೀಸರು ದೂರಿನ ಆಧಾರದ ಮೇಲೆ ಮೂವರಿಗೂ ನೋಟಿಸ್ ನೀಡಿದ್ದರು. ನೋಟೀಸ್ ನೀಡುತ್ತಿದ್ದಂತೆ ಪೂಜಾ ಮನೆ ಖಾಲಿ ಮಾಡಿ ಪರಾರಿ ಆಗಿದ್ದಳು, ಪೊಲೀಸರು ಇನ್ನಿಬ್ಬರ ವಿಚಾರಣೆ ಮಾಡಿದ ಬಳಿಕ ಈಕೆಗಾಗಿ ಹುಡುಕಾಡಿದ್ದಾರೆ. ಬಾಣಸವಾಡಿ ಬಳಿ ಮನೆ ಮಾಡಿ ವಾಸ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ 7 ಲಕ್ಷ ಮೌಲ್ಯದ 67 ಗ್ರಾಂ ಚಿನ್ನ 300 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ.

Share News

About BigTv News

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *