ಬೆಂಗಳೂರು : ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೇಪಾಳದಿಂದ ಕಳ್ಳಸಾಗಣೆ ಮಾಡಲಾಗಿದ್ದ 9ನೇ ಶತಮಾನದ ಅಪರೂಪ ಪದ್ಮಪಾಣಿ ವಿಗ್ರಹವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಏರ್ ಕಾರ್ಗೋ ವಿಭಾಗಕ್ಕೆ ಆಸ್ಟ್ರೀಯಾದ ವಿಯೆನ್ನಾದಿಂದ ಕಲ್ಲಿನ ವಿಗ್ರಹ ಬಂದಿದೆ. ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ಬೂದು ಬಣ್ಣದ ಶಿಲೆಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ, ಈ ಶಿಲೆ 9ನೇ ಶತಮಾನದ ಸೇರಿದ ನೇಪಾಳದ ಪದ್ಮಪಾಣಿ ಎಂದು ದೃಢಪಟ್ಟಿದೆ. ಕಲ್ಲಿನ ಶಿಲೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಸ್ಟಮ್ಸ್ ಅಧಿಕಾರಿಗಳು ಭಾರತದ ಪುರಾತತ್ವ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಪುರಾತತ್ವ ಇಲಾಖೆಯ ಅಧಿಕಾರಿಗಳು ಪದ್ಮಪಾಣಿ ವಿಗ್ರಹ ನೇಪಾಳಕ್ಕೆ ದೇಶಕ್ಕೆ ಸೇರಿದ್ದು, 9ನೇ ಶತಮಾನದ ಅಪರೂಪದ ವಿಗ್ರಹ ಎಂದು ಖಚಿತಪಡಿಸಿದ್ದಾರೆ. ಕಠ್ಮಂಡುವಿನ ಅಧಿಕಾರಿಗಳ ಗಮನಕ್ಕೆ ತಂದಾಗ, ಈ ವಸ್ತು ನೇಪಾಳದಿಂದ ಕಳ್ಳಸಾಗಣೆ ಮಾಡಲಾಗಿದೆ, ದೇಶದ ಸಾಂಸ್ಕೃತಿ ಕ ಸಂಪತ್ತು ಇದು ಎಂದು ತಿಳಿಸಿದ್ದಾರೆ. ಸದ್ಯ, ವಿಗ್ರಹ ಕಸ್ಟಮ್ಸ್ ಅಧಿಕಾರಿಗಳ ವಶದಲ್ಲಿದ್ದು, ನೇಪಾಳಕ್ಕೆ ಕಳುಹಿಸುವ ಬಗ್ಗೆ ಮತ್ತು ಹಸ್ತಾಂತರ ಪ್ರಕ್ರಿಯೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

