Breaking News

ಎಸ್‌ಎಸ್‌ಎಲ್ಸಿಯಲ್ಲಿ ಶೇ.100 ಫಲಿತಾಂಶ: ಹುಬ್ಬಳ್ಳಿ ಶಾಲೆಯ ಭರ್ಜರಿ ಸಾಧನೆ ಟಾಪರ್

ಶಿಕ್ಷಣದಲ್ಲಿ ಇತಿಹಾಸ ನಿರ್ಮಿಸಿದ ಶಾಲೆ: ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣ – ಭಾಗ್ಯಶ್ರೀಗೆ ಫುಲ್ ಅಂಕಗಳ ದಾಖಲೆ!

ಹುಬ್ಬಳ್ಳಿಯ ಶಾಲೆಯಿಂದ ಶೇಕಡಾ 100 ಫಲಿತಾಂಶದ ಸಿಡಿಲು ಸಾಧನೆ – ಪ್ರತಿಭಾವಂತರಿಂದ ಕೀರ್ತಿ ಪಸರ!

ಶಿಕ್ಷಣ ಕ್ಷೇತ್ರದಲ್ಲಿ ಹೊಸ ದಾಖಲೆ: ಎಸ್‌ಎಸ್‌ಎಲ್ಸಿಯಲ್ಲಿ ಶೇ.100 ಫಲಿತಾಂಶ ಸಾಧಿಸಿದ ಹುಬ್ಬಳ್ಳಿ ಶಾಲೆ! ಅಂಕ ಪಡೆದ ಭಾಗ್ಯಶ್ರೀ ಸೊಗಲದ ಟಾಪ್ – ಪ್ರತಿಭಾವಂತ ವಿದ್ಯಾರ್ಥಿಗಳಿಂದ ಶಾಲೆಗೆ ಕೀರ್ತಿಹುಬ್ಬಳ್ಳಿ: ಸಾಧನೆ ಅಂದ್ರೆ ಕೇವಲ ಅಂಕಗಳಲ್ಲ…

ಶ್ರಮ, ಶಿಸ್ತು ಮತ್ತು ಸತತ ಪ್ರಯತ್ನಗಳ ಫಲ! ಇದಕ್ಕೆ ಜೀವಂತ ಸಾಕ್ಷಿಯಾಗಿದೆ ಬಸವನಗರದ ಶ್ರೀ ಮಹಾರಾಣಾ ಪ್ರತಾಪ ಸಿಂಹ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್..

ಈ ವರ್ಷ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಸಾಧಿಸಿರುವ ಈ ಶಾಲೆ, ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಮ್ಮೆ ತನ್ನ ಮೇಲುಗೈ ತೋರಿಸಿದೆ. ಪರೀಕ್ಷೆಗೆ ಹಾಜರಾದ ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತೀರ್ಣರಾಗಿದ್ದು, “ನಾವು ಮಾಡ್ತೀವಿ ಅಂದ್ರೆ ಮಾಡ್ತೀವಿ” ಅನ್ನೋ ದೃಢ ಸಂಕಲ್ಪವನ್ನು ಸಾಬೀತುಪಡಿಸಿದ್ದಾರೆ…

ಈ ಸಾಧನೆಯ ಮಧ್ಯೆ, ಭಾಗ್ಯಶ್ರೀ ಸೊಗಲದ ಎಂಬ ಪ್ರತಿಭಾವಂತ ವಿದ್ಯಾರ್ಥಿನಿ 600ಕ್ಕೆ 600 ಅಂಕ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ. ಇವರ ಸಾಧನೆ ಶಾಲೆಗೆ ಮಾತ್ರವಲ್ಲ, ಇಡೀ ಹುಬ್ಬಳ್ಳಿಗೇ ಹೆಮ್ಮೆಯ ವಿಷಯವಾಗಿದೆ..

ಇದರಲ್ಲಿ ಇತರ ವಿದ್ಯಾರ್ಥಿಗಳೂ ಹಿಂದೆ ಬಿದ್ದಿಲ್ಲ..567 ಅಂಕಗಳೊಂದಿಗೆ ಸ್ವಾತಿ ಟನಕೆದಾರ ಮತ್ತು ಕೀರ್ತಿ ನಾಯಕ,..

565 ಅಂಕಗಳೊಂದಿಗೆ ರಾಧಾ ಪಾಟೀಲ ಮತ್ತು ಸ್ಪೂರ್ತಿ ಪವಾರ…

ಹಾಗೂ ಮೊಹಮ್ಮದ್ ರಜಾ (558), ಅರ್ಶಿಯಾ ಬಾನು ನರಗುಂದ (550), ಯೋಗಿತಾ ಮುದ್ದಿ (548) ಸೇರಿದಂತೆ ಹಲವರು ಗಮನಾರ್ಹ ಸಾಧನೆ ಮಾಡಿದ್ದಾರೆ..

ಇದಲ್ಲದೆ ಪುಷ್ಪಾ ರೇವಣಕಿ (535), ಸೃಷ್ಟಿ ಮೆಟಿ (528) ಮತ್ತು ಸಿದ್ದಾರ್ಥ ಕಾಟವೆ (525) ಕೂಡ ಉತ್ತಮ ಅಂಕಗಳೊಂದಿಗೆ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ..

ಈ ಯಶಸ್ಸಿನ ಹಿಂದೆ ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ನಿಷ್ಠಾವಂತ ಬೋಧನೆ ಮತ್ತು ಪಾಲಕರ ಬೆಂಬಲವೇ ಪ್ರಮುಖ ಕಾರಣ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.ನಾವು ಕೇವಲ ಪಾಠ ಹೇಳೋದು ಅಲ್ಲ, ಮಕ್ಕಳ ವ್ಯಕ್ತಿತ್ವ ರೂಪಿಸುವುದು ನಮ್ಮ ಗುರಿ” ಎಂದು ಶಾಲೆಯ ಮುಖ್ಯ ಶಿಕ್ಷಕರು ಹೇಳಿದ್ದಾರೆ. ಶಿಕ್ಷಣದ ಜೊತೆಗೆ ಶಿಸ್ತು ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವುದರಿಂದಲೇ ಈ ರೀತಿಯ ಫಲಿತಾಂಶ ಸಾಧ್ಯವಾಗಿದೆ ಎಂಬುದು ಅವರ ಅಭಿಪ್ರಾಯ…

ಪ್ರತಿ ವರ್ಷ ಉತ್ತಮ ಫಲಿತಾಂಶ ದಾಖಲಿಸುತ್ತಿರುವ ಈ ಶಾಲೆ, ಈ ಬಾರಿ ಶೇ.100 ಸಾಧನೆಯ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಪಾಲಕರು ಹೆಮ್ಮೆ ವ್ಯಕ್ತಪಡಿಸಿದ್ದು, ಶಿಕ್ಷಕರು ಹಾಗೂ ಆಡಳಿತ ಮಂಡಳಿಗೆ ಅಭಿನಂದನೆಗಳ ಸುರಿಮಳೆ ಹರಿದಿದೆ.

Share News

About Shaikh BigTv

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *