Breaking News

ಮೈಸೂರಲ್ಲಿ ವಸತಿ ಸೈಟ್‌ ಅಕ್ರಮ: ಉಪನೋಂದಣಾಧಿಕಾರಿ ಸಸ್ಪೆಂಡ್‌

ಮೈಸೂರು: ಕೇರ್ಗಳ್ಳಿಯ 24 ವಸತಿ ನಿವೇಶನಗಳ ಅಕ್ರಮ ನೋಂದಣಿಗೆ ಸಂಬಂಧಿಸಿ ಮೈಸೂರು ಪಶ್ಚಿಮ ಉಪ-ನೋಂದಣಾಧಿಕಾರಿ ಎನ್.ಶ್ರೀಕಾಂತ್ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ. ಸರ್ಕಾರದ ಸುತ್ತೋಲೆಗಳು, ಇಲಾಖಾ ನಿರ್ದೇಶನ ಉಲ್ಲಂಘಿಸಿ, ನ್ಯಾಯಾಲಯದ ಆದೇಶ ದುರುಪಯೋಗದ ಆರೋಪದ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ. ಇಲಾಖಾ ತನಿಖೆ ಆರಂಭಿಸಲಾಗಿದೆ. ಈ ಪ್ರಕರಣ ಡಿಸೆಂಬರ್ 2025ರಲ್ಲಿ ಬೆಳಕಿಗೆ ಬಂದಿದ್ದು, ಬಿಜೆಪಿ ಮಾಜಿ ಎಂಎಲ್‌ಸಿ ಸಿದ್ದರಾಜು ತಮ್ಮ ಕೇರ್ಗಳ್ಳಿಯ ಚಾಮುಂಡಿ ಸೂರು ನಗರ ಲೇಔಟ್‌ನ ಸೈಟ್‌ಗಳನ್ನು ಅನ್ಯರ ಹೆಸರಲ್ಲಿ ಅಕ್ರಮವಾಗಿ ನೋಂದಾಯಿಸಲಾಗುತ್ತಿದೆ ಎಂದು ಆರೋಪಿಸಿ ಉಪನೋಂದಣಾಧಿಕಾರಿ ಕಚೇರಿಗೆ ದೂರು ನೀಡಿದ್ದರು. ತನಿಖೆಯಲ್ಲಿ ನಿಯಮ ಉಲ್ಲಂಘನೆ ಕಂಡು ಬಂದಿತ್ತು.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *