ರಾಯಚೂರು: ಅಬಕಾರಿ ಮತ್ತು ಪೊಲೀಸರು ದಾಳಿ ನಡೆಸಿ ಇಲ್ಲಿನ ಚಂದ್ರಬಂಡಾ ರಸ್ತೆಯ ನರಸಿಂಹಲು( ಬ್ರೂಸ್‌ಲೀ) ಅವರ ಮನೆಯಲ್ಲಿ 1000 ಲೀಟರ್‌ಗೂ ಹೆಚ್ಚು ಸೇಂದಿ, ಸಿ.ಎಚ್. ಪೌಡರ್ ಹಾಗೂ ಅಲ್ಫಾ ಜೋಲಂ ಎಂಬ ರಾಸಾಯನಿಕಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿ ನರಸಿಂಹಲು ಅಲಿಯಾಸ್ ಬ್ರೂಸ್ ಲೀ ವಿರುದ್ಧ ಈಗಾಗಲೇ 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಗೂಂಡಾ ಕಾಯ್ದೆಯಡಿ ಜೈಲಿಗೂ ಹೋಗಿದ್ದರು. ಆದರೂ ಮತ್ತೆ ಇದೇ ದಂಧೆಯಲ್ಲಿ ತೊಡಗಿದ್ದಾರೆ ಎಂದು ಖಚಿತ ಮಾಹಿತಿಯ ಮೇರೆಗೆ ಅಬಕಾರಿ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ ನರಸಿಂಹಲು ಸೇರಿದಂತೆ ಮಹೇಶ್ ಮತ್ತು ರಮೇಶ್ ಪರಾರಿಯಾಗಿದ್ದು ಹುಡುಕಾಟ ಮುಂದುವರಿದಿದೆ. ಈ ಘಟನೆ ನಗರದ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

