Breaking News

ರಿಯಲ್ ಎಸ್ಟೇಟ್ ಉದ್ಯಮಿಯಿಂದ ಯುವಕನ ಬರ್ಬರ ಹತ್ಯೆ

ತುಮಕೂರು: ರಿಯಲ್ ಎಸ್ಟೇಟ್ ಉದ್ಯಮಿ ಮಹೇಶ್ ಮತ್ತು ಶಫಿವುಲ್ಲಾ ಅವರು 25 ವರ್ಷದ ಮಧುವನ್ ನನ್ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.ಮೂರು ಕೋಟಿ ರೂಪಾಯಿ ಮೌಲ್ಯದ ಎರಡು ಎಕರೆ ಜಮೀನಿಗಾಗಿ ಕೊಲೆ ಮಾಡಲಾಗಿದೆ. ನಿನ್ನೆ ತೋಟದಲ್ಲಿ ಇಬ್ಬರು ಆರೋಪಿಗಳು ಮಧುವನ್ ನನ್ನು ಕೊಲೆ ಮಾಡಿದ್ದಾರೆ. 2015 ರಲ್ಲಿ ಜಮೀನು ಮಾರಾಟಕ್ಕೆ ಮಧುವನ್ ತಂದೆ ನಿರ್ಧರಿಸಿದ್ದರು. ತುಮಕೂರಿನ ಅಮಾನಿಕೆರೆ ಸಮೀಪದ ಜಮೀನು ಮಾರಾಟಕ್ಕೆ ಚಿಂತನೆ ನಡೆಸಿದ್ದರು. ತನ್ನ ತಾಯಿಯಿಂದ ನಾರಾಯಣಸ್ವಾಮಿಗೆ ಜಮೀನು ಬಂದಿತ್ತು. ಅದನ್ನು ಮಹೇಶ್ ಗೆ ಮಾರಾಟ ಮಾಡಲು ಮುಂದಾಗಿದ್ದರು. ಜಮೀನು ದಾಖಲೆ ಸಮಸ್ಯೆ ಸರಿಪಡಿಸಲು ಮೂರು ವರ್ಷಗಳ ಕಾಲ ನಾರಾಯಣಸ್ವಾಮಿ ಸಮಯ ತೆಗೆದುಕೊಂಡಿದ್ದರು. ನಂತರ ಮಗ ಮಧುವನ್ ಎಂಟ್ರಿ ಆಗಿದ್ದರು. ಜಮೀನು ಮಾರಾಟಕ್ಕೆ ನಾರಾಯಣಸ್ವಾಮಿ ಪುತ್ರ ಮಧುವನ್ ನಿರಾಕರಿಸಿದ್ದ. ಕಳೆದ 7 ವರ್ಷಗಳಿಂದ ಜಮೀನು ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು. ನಿನ್ನೆ ಮಧುವನ್ ಮಾತನಾಡಿಸಲು ಮಹೇಶ್ ತೋಟಕ್ಕೆ ಬಂದಿದ್ದ. ಮಾತಿಗೆ ಮಾತು ಬೆಳೆದು ಅಲ್ಲೇ ಇದ್ದ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮ ಮಹೇಶ್ ಮತ್ತು ಶಫಿವುಲ್ಲಾ ಅವರನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆಯ ವಿನೋದ್ (45) ಎಂಬುವರು 80ರ ದಶಕದ ಶೈಲಿಯಲ್ಲಿ ಫೋಟೋ ಎಡಿಟ್ ಮಾಡಲು ನಕಲಿ ಆ್ಯಪ್ …

Leave a Reply

Your email address will not be published. Required fields are marked *