ಬೆಂಗಳೂರಲ್ಲಿ ಮಹಿಳೆಯ ಜೊತೆ ರಾಸಲೀಲೆ ವಿಡಿಯೋ ಇಟ್ಟುಕೊಂಡು ಕಾಮುಕನೊಬ್ಬ ಬ್ಲ್ಯಾಕ್ ಮೇಲ್ ಮಾಡುತ್ತಿದ್ದು, ಆರ್ ಆರ್ ನಗರ ಪೊಲೀಸ್ರಿಂದ ಆರೋಪಿ ಚಂದ್ರೇಗೌಡನನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿ ಚಂದ್ರೇಗೌಡ ರಾಮನಗರ ಮಕ್ಕಳ ಆಯೋಗ ಸಮಿತಿ ಸದಸ್ಯನಾಗಿದ್ದು, ನಾನು ಪೊಲೀಸ್, ರಿಪೋರ್ಟರ್, ವಕೀಲ ಎಂದು ಹೇಳಿ ವಂಚನೆ ಎಸಗುತ್ತಿದ್ದ. ಅಲ್ಲದೇ ಹಲವು ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಗಂಡನಿಂದ ದೂರವಾಗಿದ್ದ ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದ ಚಂದ್ರೆಗೌಡ ನನಗೆ ಡಿವೋರ್ಸ್ ಆಗಿದ್ದು ಮದುವೆಯಾಗುತ್ತೇನೆ ಎಂದು ನಂಬಿಸಿದ್ದಾನೆ. ಅಲ್ಲದೆ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಬಳಿಕ ಹಾಗೆಯೇ ಜೊತೆಗೆ ದೈಹಿಕ ಸಂಪರ್ಕವನ್ನು ಬೆಳೆಸಿದ್ದಾನೆ. ಆ ವೇಳೆ ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲೆ ಮಾಡಿದ್ದಾನೆ ನಂತರ ಬೆದರಿಕೆ ಒಡ್ಡಿ 5 ಲಕ್ಷ ಹಣವನ್ನು ಕೂಡ ಚಂದ್ರೇಗೌಡ ಪಡೆದುಕೊಂಡಿದ್ದಾನೆ. ಸದ್ಯ ಪೊಲೀಸರು ಕಿರಾತಕನನ್ನು ಅರೆಸ್ಟ್ ಮಾಡಿದ್ದಾರೆ. ಚಂದ್ರೇಗೌಡನ ಮೊಬೈಲ್ ನಲ್ಲಿ ರಾಸಲೀಲೆ ವಿಡಿಯೋಗಳು ಇದ್ದು ಸುಮಾರು 20ಕ್ಕೂ ಹೆಚ್ಚು ಮಹಿಳೆಯರ ಜೊತೆಗಿದ್ದ ವಿಡಿಯೋಗಳು ಪತ್ತೆಯಾಗಿವೆ. ಚಂದ್ರೇಗೌಡನ ಕಾಮಕಾಂಡ ಪತ್ತೆಹಚ್ಚಿದ ದೂರುದಾರ ಮಹಿಳೆ ಬಳಿಕ ಆರ್ ಆರ್ ನಗರ ಪೊಲೀಸ್ ರಿಗೆ ದೂರು ನೀಡಿದ್ದಾಳೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

