ಚಿಕ್ಕೋಡಿ: ಗಂಡನ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಂಕರಮಠ ಗಲ್ಲಿಯಲ್ಲಿ ಸಂಭವಿಸಿದೆ.35 ವರ್ಷದ ಸಂಗೀತಾ ಗಾಡಿವಡ್ಡರ ಆತ್ಮಹತ್ಯೆಗೆ ಶರಣಾದ ಮಹಿಳೆ. 15 ವರ್ಷಗಳ ಹಿಂದೆ ವೆಂಕಟೇಶ್ ಗಾಡಿವಡ್ಡರ್ ಜೊತೆ ವಿವಾಹವಾಗಿದ್ದ ಸಂಗೀತಾ, ಕಳೆದ ಕೆಲ ವರ್ಷಗಳಿಂದ ದಾಂಪತ್ಯ ಕಲಹದಿಂದ ಸಂಕಷ್ಟದಲ್ಲಿದ್ದರು.ಏಪ್ರಿಲ್ 29ರ ರಾತ್ರಿ ಗಂಡನ ಕಿರುಕುಳ ತಾಳಲಾರದೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತಳ ತಾಯಿ ಗಂಭೀರ ಆರೋಪ ಮಾಡಿದ್ದು, “ಮನೆ ಕಟ್ಟಿಕೊಳ್ಳಲು 2 ಲಕ್ಷ ರೂ. ತರಲು ಒತ್ತಾಯ ಮಾಡುತ್ತಿದ್ದ. ಹಣ ಕೊಡದಿದ್ದಕ್ಕೆ ಹೊಡೆದು ಹಿಂಸೆ ನೀಡುತ್ತಿದ್ದ” ಎಂದು ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ವರದಕ್ಷಿಣೆ ಕಿರುಕುಳದ ಮರುಳು ಕೂಡ ಸೇರ್ಪಡೆಯಾಗಿದೆ. ಘಟನಾ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

