Breaking News

ದಂಡದ ಹೆಸರಿನಲ್ಲಿ ಹಣ ಬೇಡಿಕೆ ಆರೋಪ: ಇನ್​ಸ್ಪೆಕ್ಟರ್ ಮೈಚಳಿ ಬಿಡಿಸಿದ ಪ್ರಯಾಣಿಕ!

ಹೈದರಾಬಾದ್: ತೆಲಂಗಾಣದ ರಾಯಕೊಡೆಯಲ್ಲಿ ಟಿಕೆಟ್ ತಪಾಸಣೆ ವೇಳೆ ಪ್ರಯಾಣಿಕರು ಮತ್ತು ಟಿಕೆಟ್ ಇನ್ಸ್‌ಪೆಕ್ಟರ್ ನಡುವೆ ಘರ್ಷಣೆ ಉಂಟಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹೈದರಾಬಾದ್ ನಿಂದ ನಾರಾಯಣಖೇಡ್ ಕಡೆಗೆ ತೆರಳುತ್ತಿದ್ದ ಆರ್‌ಟಿಸಿ ಬಸ್‌ನಲ್ಲಿ ಈ ಘಟನೆ ನಡೆದಿದೆ.ತುಂಬಿ ತುಳುಕುತ್ತಿದ್ದ ಬಸ್ ಅನ್ನು ರಾಯಕೊಡೆಯಲ್ಲಿ ಮಧ್ಯದಲ್ಲೇ ನಿಲ್ಲಿಸಿ ಟಿಕೆಟ್ ಸ್ಕ್ವಾಡ್ ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ಒಬ್ಬ ಪ್ರಯಾಣಿಕನ ಬಳಿ ಟಿಕೆಟ್ ಇಲ್ಲದಿರುವುದು ಪತ್ತೆಯಾಗಿದೆ. ಆರೋಪದ ಪ್ರಕಾರ, ಟಿಕೆಟ್ ಇನ್ಸ್‌ಪೆಕ್ಟರ್ ಸಾಮಾನ್ಯವಾಗಿ ವಿಧಿಸುವ ದಂಡದ ಬದಲಾಗಿ ಹೆಚ್ಚು ಹಣ ಕೇಳಿ, ಸುಮಾರು 2,000 ರೂಪಾಯಿ ನೀಡಲು ಒತ್ತಾಯಿಸಿದ್ದಾನೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕ ಟಿಕೆಟ್ ಇನ್ಸ್‌ಪೆಕ್ಟರ್ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಬಸ್ ಕಂಡಕ್ಟರ್ ಕೂಡ ಪ್ರಯಾಣಿಕನ ಪರವಾಗಿ ಸೇರಿಕೊಂಡಿದ್ದು, ಘಟನೆ ಮತ್ತಷ್ಟು ಗಂಭೀರ ಸ್ವರೂಪ ಪಡೆದಿದೆ.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

Share News

About BigTv News

Check Also

ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ಜಗಳ; ಚಿಕ್ಕಪ್ಪನಿಗೆ ಚಾಕು ಇರಿತ!

ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ಜಮೀನಿನ ಗಡಿ ಹಾಗೂ ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನೊಬ್ಬ …

Leave a Reply

Your email address will not be published. Required fields are marked *