ಪುಣೆ: ಮೂರು ವರ್ಷದ ಬಾಲಕನ ಮೇಲೆ ಅಪ್ರಾಪ್ತ ವಯಸ್ಕನೊಬ್ಬ ಅತ್ಯಾಚಾರವೆಸಗಿ ಬಳಿಕ ಕೊಲೆ ಮಾಡಿರುವ ಘಟನೆ ಪುಣೆಯಲ್ಲಿ ನಡೆದಿದೆ. ಆರೋಪಿಯು ಮಗುವಿನ ನೆರೆಹೊರೆಯಲ್ಲೇ ವಾಸಿಸುತ್ತಿದ್ದು, ನಿವಾಸದ ಹೊರಗಡೆ ಮಗು ಆಟವಾಡುತ್ತಿದ್ದ ವೇಳೆ ಅಲ್ಲಿಯ ಮನೆಯೊಂದರೊಳಗೆ ಕರೆದುಕೊಂಡು ಹೋಗಿ ಅತ್ಯಾಚರವೆಸಗಿ ಬಳಿಕ ಕೊಲೆ ಮಾಡಿ ಶವವನ್ನು ಸೂಟ್‌ಕೇಸ್‌ನಲ್ಲಿ ಇರಿಸಿ ಪರಾರಿಯಾಗಿದ್ದನು. ಇದ್ದಕ್ಕಿದ್ದಂತೆ ಮಗು ನಾಪತ್ತೆಯಾಗಿದ್ದರಿಂದ ಎಲ್ಲೆಡೆ ಹುಡುಕಾಡಿ ಬಳಿಕ ಪೊಲೀಸರಿಗೆ ದೂರು ಸಲ್ಲಿಸಿದ್ದು, ಪೊಲೀಸರು ಬಾಲಕನ ಶವವನ್ನು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದು ಇತ್ತೀಚಿಗೆ ನಡೆದ 2ನೇ ಘಟನೆಯಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

