ಸೈಟ್ ಇಲ್ಲ.. ಹಣವೂ ಇಲ್ಲ..! 215 ಜನರ ಅಳಲು—ಡೆವಲಪರ್ ವಿರುದ್ಧ ಕ್ರಮ ಯಾವಾಗ.? Agrahar Timmasagar, Mavanur Road, Hubli
ಹುಬ್ಬಳ್ಳಿಯ ಅಮರ್ ನಗರ ಲೇಔಟ್‌ನಲ್ಲಿ ಸೈಟ್ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 215 ಜನರಿಗೆ ವಂಚನೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ…
ಸೈಟ್ ಸಿಗುತ್ತೆ ಎಂಬ ನಂಬಿಕೆಯಿಂದ ಹಣ ನೀಡಿದ ಜನರು ಇದೀಗ ಸೈಟ್‌ವೂ ಇಲ್ಲ, ಹಣವೂ ಇಲ್ಲ ಎಂಬ ಆರೋಪದೊಂದಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ…
ಕಷ್ಟಪಟ್ಟು ದುಡಿದ ಹಣ ನೀಡಿ ಸೈಟ್ ಖರೀದಿಸಲು ಮುಂದಾದ ಜನರಿಗೆ ನ್ಯಾಯ ಯಾವಾಗ ಸಿಗಲಿದೆ ಎಂಬ ಪ್ರಶ್ನೆ ಇದೀಗ ಎದುರಾಗಿದೆ….
ಇನ್ನು ಇದೇ ರೀತಿಯ ವಂಚನೆ ಆರೋಪಗಳು ಪದೇಪದೇ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಸಂಬಂಧಿಸಿದ ಡೆವಲಪರ್ ವಿರುದ್ಧ ಸರ್ಕಾರ ಹಾಗೂ ಅಧಿಕಾರಿಗಳು ಯಾವ ರೀತಿಯ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂಬುದು ಸಾರ್ವಜನಿಕರ ಪ್ರಮುಖ ಪ್ರಶ್ನೆಯಾಗಿದೆ…
215 ಜನರ ಹಣದ ವಿಚಾರದಲ್ಲಿ ಹೊಣೆ ಯಾರು? ವಂಚನೆ ಆರೋಪದ ಬಗ್ಗೆ ಸಮಗ್ರ ತನಿಖೆ ಯಾವಾಗ..? ಜನರಿಗೆ ನ್ಯಾಯ ಯಾವಾಗ..?
ಆರೋಪಗಳು ಸತ್ಯವೇ, ಸುಳ್ಳೇ ಎಂಬುದು ತನಿಖೆಯಿಂದ ಹೊರಬರಬೇಕಿದೆ. ಆದರೆ ಆರೋಪಗಳ ಗಂಭೀರತೆಯನ್ನು ಪರಿಗಣಿಸಿ, ಸರ್ಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ…
ಅಮರ್ ನಗರ ಲೇಔಟ್‌ನ 215 ಜನರ ಅಳಲಿಗೆ ಸರ್ಕಾರದ ಉತ್ತರ ಏನು? ಡೆವಲಪರ್ ವಿರುದ್ಧ ಮುಂದಿನ ಕ್ರಮವೇನು? ಅನ್ನೋದನ್ನ ಕಾದು ನೋಡಬೇಕಾಗಿದೆ..!
bigtvnews | Hubli Dharwad News | Kannada News | Karnataka News Hubli News | News In Hubli | Local news

