Breaking News

ನಿಧಿ ಆಸೆ ತೋರಿಸಿ ₹ 5 ಲಕ್ಷ ವಂಚನೆ, ಹಲಗೇರಿ ಠಾಣೆಯಲ್ಲಿ ಪ್ರಕರಣ ದಾಖಲು

ಹಾವೇರಿ: ‘ಮನೆಯ ಪಾಯ ಅಗೆಯುವಾಗ 2 ಕೆ.ಜಿ. ಚಿನ್ನದ ನಿಧಿ ಸಿಕ್ಕಿದೆ. ಅದನ್ನು ₹ 5 ಲಕ್ಷಕ್ಕೆ ಕೊಡುತ್ತೇವೆ’ ಎಂದು ಹೇಳಿ ನಂಬಿಸಿ ₹ 5 ಲಕ್ಷ ನಗದು ಕಿತ್ತೊಯ್ಯಲಾಗಿದ್ದು, ಈ ಬಗ್ಗೆ ಹಲಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಮೇ 6ರಂದು ನಡೆದ ಕೃತ್ಯದ ಬಗ್ಗೆ ಸಂತ್ರಸ್ತ ಶಶಿಕುಮಾರ ದೂರು ನೀಡಿದ್ದಾರೆ. ಆರೋಪಿ ಮಂಜಣ್ಣ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು. ‘ವಿಜಯಪುರ ಜಿಲ್ಲೆಯ ಶಶಿಕುಮಾರ ಅವರು ಹುಬ್ಬಳ್ಳಿಯಲ್ಲಿ ಪರೀಕ್ಷೆಯೊಂದಕ್ಕೆ ಹೋಗಿದ್ದರು. ಅದೇ ಸಂದರ್ಭದಲ್ಲಿ ಅವರಿಗೆ ಆರೋಪಿ ಪರಿಚಯವಾಗಿತ್ತು. ಪರಸ್ಪರ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಶಶಿಕುಮಾರ ಅವರಿಗೆ ಕರೆ ಮಾಡಿದ್ದ ಆರೋಪಿ, ‘ನಮ್ಮ ಮನೆಯ ಪಾಯ ಅಗೆಯುವಾಗ, 2 ಕೆ.ಜಿ. ಚಿನ್ನದ ನಿಧಿ ಸಿಕ್ಕಿದೆ. ಅದನ್ನು ನಿಮಗೆ ₹5 ಲಕ್ಷಕ್ಕೆ ಕೊಡುತ್ತೇವೆ’ ಎಂದಿದ್ದ. ಆತನ ಮಾತು ನಂಬಿದ್ದ ದೂರುದಾರ, ತಮ್ಮೂರಿನಿಂದ ಹುಬ್ಬಳ್ಳಿಗೆ, ನಂತರ ರಟ್ಟೀಹಳ್ಳಿಗೆ ಬಂದಿದ್ದರು’ ಎಂದು ಪೊಲೀಸರು ತಿಳಿಸಿದರು. ದೂರುದಾರ ಹಾಗೂ ಆತನ ಸಂಬಂಧಿ, ಸ್ಥಳಕ್ಕೆ ಹೋಗಿದ್ದರು. ಸ್ಥಳದಲ್ಲಿದ್ದ ಇಬ್ಬರು ಆರೋಪಿಗಳು, ದೂರುದಾರರನ್ನು ಸಮೀಪದ ಚಾನಲ್ ಬಳಿ ಕರೆದೊಯ್ದಿದ್ದರು’ ಎಂದರು. ‘ದೂರುದಾರರನ್ನು ಬೆದರಿಸಿದ್ದ ಆರೋಪಿಗಳು, ಅವರ ಬಳಿಯ ₹ 5 ಲಕ್ಷ ನಗದು ಹಾಗೂ 50 ಗ್ರಾಂ ತೂಕದ ಬೆಳ್ಳಿ ಬ್ರಾಸ್‌ಲೈಟ್ ಕಿತ್ತುಕೊಂಡು ಪರಾರಿಯಾಗಿದ್ದಾರೆ’ ಎಂದು ಪೊಲೀಸರು ಹೇಳಿದರು.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *