Breaking News

ಕೃಷಿ ವಸ್ತು ಪ್ರದರ್ಶನಕ್ಕೆ ಸುಬ್ಬೇಗೌಡ ಚಾಲನೆ.

ಮಂಡ್ಯ: ಟಿಎಪಿಸಿಎಂಎಸ್ ಆವರಣದಲ್ಲಿ ನಡೆದ ಸಮಗ್ರ ಕೃಷಿ ಅಭಿಯಾನ ಯೋಜನೆಯಡಿಮಂಡ್ಯ ಜಿಲ್ಲೆ ಮಂಡ್ಯ ಕೆ.ಆರ್ ಪೇಟೆಯಲ್ಲಿಕಾರ್ಯಕ್ರಮದ ಅಂಗವಾಗಿ ನಡೆದ ಕೃಷಿ ವಸ್ತು ಪ್ರದರ್ಶನ ಹಾಗೂ ಸಮಗ್ರ ಮಾಹಿತಿ ಕಾರ್ಯಕ್ರಮವನ್ನು ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ವಿಠಲಾಪುರ ಸುಬ್ಬೇಗೌಡ ಉದ್ಘಾಟಿಸಿದರು.ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸಿ ಬೇಸಾಯ ಮಾಡಿದರೆ ರೈತರ ಬಾಳು ಬಂಗಾರವಾಗುವುದಲ್ಲದೇ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿಕೊಳ್ಳಬಹುದು..ರೈತರು ಇಷ್ಟಪಟ್ಟು ಅಭಿಮಾನದಿಂದ, ಕೃಷಿತಜ್ಞರ ಸಲಹೆ ಸೂಚನೆ ಪಡೆದುಕೊಂಡು ಬೇಸಾಯ ಮಾಡಿದರೆ ಸಾಕು ಭೂಮಿ ತಾಯಿಯು ರೈತರನ್ನು ಕೈಬಿಟ್ಟ ಉದಾಹರಣೆಯೇ ಇಲ್ಲ..ಆದ್ದರಿಂದ ರೈತ ಬಾಂಧವರು ಕಡಿಮೆ ಖರ್ಚಿನ ಸಾವಯವ ಕೃಷಿ ಪದ್ಧತಿಯ ಬೇಸಾಯ ಕ್ರಮವನ್ನು ಮೈಗೂಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಪ್ರಗತಿಯ ದಿಕ್ಕಿನತ್ತ ಸಾಗಬೇಕು ಎಂದು ಸುಬ್ಬೇಗೌಡ ಕರೆ ನೀಡಿದರು.ಕಸಬಾ ಕ್ಷೇತ್ರದ ಜಿಲ್ಲಾ ಪಂಚಾಯತ ಸದಸ್ಯ ರಾಮದಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ತಾಲೂಕು ಪಂಚಾಯಿತಿ ಸ್ಥಾಯಿಸಮಿತಿ ಅಧ್ಯಕ್ಷ ರಾಜು, ಸದಸ್ಯೆ ದೀಪಶ್ರೀಮಂಜೇಗೌಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವರದರಾಜೇಗೌಡ, ಕೃಷಿಕ ಸಮಾಜದ ನಿರ್ದೇಶಕರಾದ ಜಗಧೀಶ್, ನಾರಾಯಣಗೌಡ, ರೈತ ವಿಜ್ಞಾನಿ ರೋಬೋ ಮಂಜೇಗೌಡ ಮತ್ತಿತರರು ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೃಷಿ ವಸ್ತುಪ್ರದರ್ಶನ ಕಾರ್ಯಕ್ರಮದಲ್ಲಿ ಕಸಬಾ ಹೋಬಳಿಯ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಪ್ರಗತಿಪರ ರೈತರು ಭಾಗವಹಿಸಿದ್ದರು.ಕೃಷಿ ಅಧಿಕಾರಿ ಜಯಶಂಕರ ಆರಾಧ್ಯ ಸ್ವಾಗತಿಸಿದರು.. ಕೃಷಿ ಅಧಿಕಾರಿ ಶ್ರೀಧರ್ ಕಾರ್ಯಕ್ರಮ ನಡೆಸಿಕೊಟ್ಟರು… ತೋಟಗಾರಿಕೆ ಅಧಿಕಾರಿ ಜಯರಾಮು, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಜಗಧೀಶ್ ಮತ್ತು ರೈತ ವಿಜ್ಞಾನಿ ರೋಬೋ ಮಂಜೇಗೌಡ, ರೈತಮಹಿಳೆ ಲಕ್ಷ್ಮೀದೇವಮ್ಮ ಕೃಷಿ ಮಾಹಿತಿಯನ್ನು ನೀಡಿದರು….

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *