Breaking News

ಬಾರ್ ನಲ್ಲಿ ಕುಡಿದು ಹಣ ನೀಡದೆ ಗಲಾಟೆ; ದೂರು ದಾಖಲು

ಬಂಟ್ವಾಳ: ಬಾರ್ ನಲ್ಲಿ ಮದ್ಯ ಸೇವಿಸಿ ಹಣ ನೀಡದೆ ಗಲಾಟೆ ಮಾಡಿದ ಘಟನೆಗೆ ಸಂಬಂಧಿಸಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಮ್ಮೆಮಾರ್ ನಿವಾಸಿ ಅಬ್ದುಲ್ ರಹಿಮಾನ್ ಎಂಬಾತನು ಫರಂಗಿಪೇಟೆಯಲ್ಲಿರುವ ಬಾರ್ ಗೆ ಬಂದು ಮದ್ಯ ಸೇವನೆ ಮಾಡಿದ ಬಳಿಕ 1,560 ರೂ.ಗಳ ಬಿಲ್ಲು ಕೊಟ್ಟಾಗ ಹಣ ಕೊಡುವುದಿಲ್ಲ ಎಂದು ಹೇಳಿ ಉಡಾಫೆ ಹಾಗೂ ಗಲಾಟೆ ಮಾಡಿದ್ದಾನೆ ಹಾಗೂ ಬಿಲ್ ಕೊಡದೆ ಹೋಗಿದ್ದನು. ಬಾರ್ ನ ಸಿಬಂದಿ ವಾಸವಿರುವ ರೂಂ ಬಳಿಗೆ ತೆರಳಿ ಬೆದರಿಕೆ ಹಾಕಿದ್ದನು. ರಾತ್ರಿ ಮತ್ತೆ ಬಾರ್ ಗೆ ಆಗಮಿಸಿ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಒಡ್ಡಿ, ಕಂಪ್ಯೂಟರ್ ಗೆ ಹಾನಿ ಮಾಡಿದ್ದಾನೆ ಎಂದು ಗುರುಪ್ರಸಾದ್‌ ಎಂ.ಆರ್. ದೂರು ನೀಡಿದ್ದಾರೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *