Breaking News

ನಕಲಿ ಟ್ರೇಡಿಂಗ್‌ ಆಯಪಿಂದ 100 ಕೋಟಿ ರೂ. ವಂಚನೆ!

ನವದೆಹಲಿ: ನಕಲಿ ಟ್ರೇಡಿಂಗ್‌ ಮೊಬೈಲ್‌ ಆಯಪ್‌ ಹಾಗೂ ವೆಬ್‌ಸೈಟ್‌ಅನ್ನು ಸೃಷ್ಟಿಸುವ ಮೂಲಕ ಬರೋಬ್ಬರಿ 100 ಕೋಟಿ ರೂ. ವಂಚಿಸಿದ ಜಾಲವೊಂದನ್ನು ದೆಹಲಿ ಸೈಬರ್‌ ಪೊಲೀಸರು ಭೇದಿಸಿದ್ದಾರೆ. ಪಹರ್‌ಗಂಜ್ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು ಪ್ರಮುಖ ಆರೋಪಿ ಸಾಫ್ಟ್‌ವೇರ್ ಎಂಜಿನಿಯರ್‌ ರವಿ ರಾಥೋಡ್‌ನನ್ನು ಬೆಂಗಳೂರಿನಲ್ಲಿ ಹಾಗೂ ಆತನ ಇಬ್ಬರು ಸಹಚರರನ್ನು ಮಧ್ಯಪ್ರದೇಶದಲ್ಲಿ ಬಂಧಿಸಿದ್ದಾರೆ. ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರವಿ ಹಣದಾಸೆಗೆ ಈ ರೀತಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರಂಭದಲ್ಲಿ ಸಣ್ಣ ಮೊತ್ತದ ಹೂಡಿಕೆ ಮಾಡಿಸಿ, ಆಯಪ್‌ನಲ್ಲಿ ಸುಳ್ಳು ಲಾಭವನ್ನು ತೋರಿಸಲಾಗುತ್ತಿತ್ತು. ಹೂಡಿಕೆದಾರರು ಹಣ ಹಿಂಪಡೆಯಲು ಹೋದಾಗ, ತೆರಿಗೆ ಅಥವಾ ಪ್ರೊಸೆಸಿಂಗ್ ಫೀಸ್ ಹೆಸರಿನಲ್ಲಿ ಮತ್ತೆ ಹಣ ವಸೂಲಿ ಮಾಡಲಾಗುತ್ತಿತ್ತು. ಬೆಂಗಳೂರಿನಿಂದ ತಾಂತ್ರಿಕ ಮೂಲಸೌಕರ್ಯ ನಿರ್ವಹಿಸುತ್ತಿದ್ದರೆ, ಮಧ್ಯಪ್ರದೇಶದ ಸನಾವಾದ್‌ನಿಂದ ಕಾಲ್ ಸೆಂಟರ್ ನಡೆಸಲಾಗುತ್ತಿತ್ತು. ಈ ವರೆಗೆ ಸುಮಾರು 636 ಖಾತೆಗಳ ಮೂಲಕ 14,232 ವಹಿವಾಟುಗಳು ನಡೆದಿರುವುದು ಪತ್ತೆಯಾಗಿದೆ.
ಪೊಲೀಸರು 2 ಲ್ಯಾಪ್‌ಟಾಪ್‌ಗಳು, 18ಕ್ಕೂ ಹೆಚ್ಚು ಮೊಬೈಲ್‌ಗಳು, ಐಷಾರಾಮಿ ಕಾರು ಮತ್ತು ಸಾವಿರಾರು ಸಂತ್ರಸ್ತರ ಡೇಟಾವನ್ನು ವಶಪಡಿಸಿಕೊಂಡಿದ್ದಾರೆ.

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *