Breaking News

ಶಿಡ್ಲಘಟ್ಟ: ರೇಷ್ಮೆಗೆ ವಿಷವಿಕ್ಕಿದ ದುಷ್ಕರ್ಮಿಗಳು

ಶಿಡ್ಲಘಟ್ಟ: ತಾಲ್ಲೂಕಿನ ಕನ್ನಮಂಗಲದ ಗಂಗರಾಜು ಅವರ ಹಿಪ್ಪುನೇರಳೆ ಸೊಪ್ಪಿಗೆ ದುಷ್ಕರ್ಮಿಗಳು ವಿಷವನ್ನು ಸಿಂಪಡಿಸಿದ್ದರಿಂದಾಗಿ ರೇಷ್ಮೆ ಹುಳುಗಳು ಸತ್ತಿವೆ. ಹಣ್ಣಾದ ಹಂತದಲ್ಲಿದ್ದ ಒಟ್ಟಾರೆ 150 ಮೊಟ್ಟೆಗಳ ಹುಳುಗಳು ಸತ್ತಿರುವುದರಿಂದ ರೈತರಿಗೆ ನಷ್ಟವಾಗಿದೆ. ಗಂಗರಾಜು ಅವರ ಹಿಪ್ಪುನೇರಳೆ ತೋಟದಲ್ಲಿ ಸೊಪ್ಪಿಗೆ ದುಷ್ಕರ್ಮಿಗಳು ವಿಷ ಸಿಂಪಡಿಸಿದ್ದು, ಆ ಸೊಪ್ಪನ್ನು ಹುಳುಗಳಿಗೆ ತಿನ್ನಲು ಹಾಕಿದ್ದರಿಂದ ಸಂಪೂರ್ಣ ಬೆಳೆ ನಾಶವಾಗಿದೆ.ಈ ಹಿಂದೆಯೂ ಕಿಡಿಗೇಡಿಗಳು ತೋಟಕ್ಕೆ ವಿಷ ಹಾಕಿದ್ದರು. ಆಗ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಪೊಲೀಸರು ಆರೋಪಿತರನ್ನು ಕರೆಸಿ ಎಚ್ಚರಿಕೆ ನೀಡಿದ್ದರು. ಆದರೂ ಕಿಡಿಗೇಡಿಗಳು ತೋಟಕ್ಕೆ ವಿಷ ಹಾಕುವುದು ನಿಂತಿಲ್ಲ ಎಂದು ರೈತ ಗಂಗರಾಜು ಆರೋಪಿಸಿದರು. ಭಾನುವಾರ ಸ್ಥಳಕ್ಕೆ ಭೇಟಿ ನೀಡಿದ್ದ ರೇಷ್ಮೆ ಇಲಾಖೆ ಅಧಿಕಾರಿಗಳು ಸೊಪ್ಪಿಗೆ ವಿಷ ಸಿಂಪಡನೆ ಆಗಿರುವುದು ದೃಢೀಕರಿಸಿದ್ದು, ಅದರಿಂದಲೇ ಹುಳುಗಳು ಸತ್ತಿವೆ ಎಂದು ಹೇಳಿದ್ದಾರೆ. ರೈತ ಪೋಲೀಸರಿಗೆ ದೂರು ನೀಡಿದ್ದಾರೆ.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *