ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿದ್ದ ವೇಳೆ ಉಸಿರುಗಟ್ಟಿ ಮೃತಪಟ್ಟ ಹಸುವೊಂದನ್ನು ಅನುಮತಿ ಇಲ್ಲದೆ ಕೆರೆಯಲ್ಲಿ ಸಮಾಧಿ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಹೊಸಕೋಟೆ ತಾಲ್ಲೂಕಿನ ಯಳಚೇನಹಳ್ಳಿ ಗ್ರಾಮದ ನಯಾಜ್ ಷರೀಪ್ ಹಾಗೂ ಕೆ.ಆರ್.ಪುರಂನ ಸಮೀವುಲ್ಲಾ ಬಂಧಿತ ಆರೋಪಿಗಳು. ಬಂಧಿತರು ತಾಲ್ಲೂಕಿನ ಶೆಟ್ಟಿ ಬನಕನಹಳ್ಳಿ ಗ್ರಾಮದ ಕೆರೆಯಲ್ಲಿ ಸತ್ತ ಹಸುವನ್ನು ಸಮಾಧಿ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಂಧಿತರು ಆಂಧ್ರಪ್ರದೇಶದ ಪುಂಗನೂರಿನಲ್ಲಿ ಹಸುಗಳನ್ನು ಖರೀದಿಸಿ ಈಚರ್ ಟೆಂಪೊ ಕ್ಯಾಂಟರ್ ಮೂಲಕ ಹೊಸಕೋಟೆಗೆ ಸಾಗಿಸಿ ಗೋಮಾಂಸಕ್ಕಾಗಿ ಬಳಸಿಕೊಳ್ಳಲು ಮುಂದಾಗಿದ್ದರು ಎಂಬುದು ಗೊತ್ತಾಗಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ಅರುಣ್ ಗೌಡ ಪಾಟೀ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

