Breaking News

ಬೆಂಗಳೂರಲ್ಲಿ ಪ್ರೇಯಸಿ ಕೊಂದು ಕೆರೆಗೆ ಶವ ಎಸೆದು ಪರಾರಿ : ಪ್ರಿಯಕರ ಅರೆಸ್ಟ್!

ಬೆಂಗಳೂರಲ್ಲಿ ಪ್ರೇಯಸಿಯನ್ನ ಕೊಂದು ಶವವನ್ನು ಕೆರೆಗೆ ಎಸೆದು ಪರಾರಿಯಾಗಿದ್ದ ಪ್ರಿಯಕರನನ್ನ ಇದೀಗ ಬೆಂಗಳೂರಿನ ಹೆಬ್ಬಗೋಡಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನ ರತನ್ ದಾಸ್ (37) ಎಂದು ತಿಳಿದುಬಂದಿದೆ. ಅಸ್ಸಾಂ ಮೂಲದ ಅಂಜಲಿ ನಾಥ್ (47) ಎಂಬಾಕೆಯನ್ನ ರತನ್ ದಾಸ್ ಕೊಲೆ ಮಾಡಿದ್ದ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ತಿರುಪಾಳ್ಯ ಕೆರೆ ಹತ್ಯೆಗು ಮುನ್ನ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯಿಸಿದ್ದ. ಮದುವೆ ಮಾಡಿಕೊಳ್ಳುವಂತೆ ರತನ್ ದಾಸ್ ಗೆ ದುಂಬಾಲು ಬಿದ್ದಿದ್ದ. ಈ ವೇಳೆ ರತನ್ ದಾಸ್, ಅಂಜಲಿ ನಾಥ್ ನಡುವೆ ಜಗಳ ಆಗಿದೆ. ಜಗಳ ವಿಕೋಪಕ್ಕೆ ಹೋಗಿ ಅಂಜಲಿ ನಾಥ್ ಕೊಂದಿದ್ದ ರತನ್ ದಾಸ್. ಉಸಿರುಗಟ್ಟಿಸಿ ಕೊಂದು ಶವ ಕೆರೆಗೆ ಎಸೆದು ಎಸ್ಕೇಪ್ ಆಗಿದ್ದ. ಮರುದಿನ ವಾಕಿಂಗ್ ಹೋಗುವವರು ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅನುಮಾನಸ್ಪದ ಸಾವು ಎಂದು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. CDR ಹಾಗು ಟವರ್ ಲೊಕೇಶನ್ ಆಧರಿಸಿ ರತನ್ ನನ್ನ ಅರೆಸ್ಟ್ ಮಾಡಿದ್ದಾರೆ.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *