Breaking News

ಅಕ್ರಮವಾಗಿ ಸಾಗಿಸುತ್ತಿದ್ದ ಬೀಟೆ ದಿಮ್ಮಿ ವಶ, ಆರೋಪಿ ಬಂಧನ

ಹುಣಸೂರಿನಲ್ಲಿ ಅಕ್ರಮವಾಗಿ ಬೀಟೆ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ಚಾಲಕ ಅಬ್ದುಲ್ ಶುಕೂರ್‌ನನ್ನು ಬಂಧಿಸಿದ್ದಾರೆ. ಸುಮಾರು ₹30 ಲಕ್ಷ ಮೌಲ್ಯದ 45 ಬೀಟೆ ಮರದ ದಿಮ್ಮಿಗಳು ಪತ್ತೆಯಾಗಿವೆ. ಕೊಡಗಿನಿಂದ ಕಾಫಿ ಹಾಗೂ ಮರದ ಹೊಟ್ಟು ಮೂಟೆಗಳ ನಡುವೆ ದಿಮ್ಮಿಗಳನ್ನು ಮರೆಮಾಚಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಆಜಾದ್ ನಗರದ ಬಳಿ ದಾಳಿ ನಡೆಸಿ ಲಾರಿ, ಮರದ ದಿಮ್ಮಿಗಳು ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ದೊಡ್ಡ ಜಾಲದ ಶಂಕೆ ವ್ಯಕ್ತವಾಗಿದ್ದು, ಇತರೆ ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ತನಿಖೆ ಮುಂದುವರಿಸಿದೆ.

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *